ಬೆಂಗಳೂರು, ಜು 12 (DaijiworldNews/MS): ಸದನ ಅಥವಾ ಹೊರಗಡೆ ಮಾತನಾಡಿದ್ದನ್ನು ಟ್ರೋಲ್ ಮಾಡುವವರಿಗೆ ತಲೆ ಕೆಡಿಸಿಕೊಳ್ಳದೆ ಧೈರ್ಯವಾಗಿ ಮಾತನಾಡಿ ಎಂದು ಶಾಸಕ ಪ್ರದೀಪ್ ಈಶ್ವರ್ಗೆ ಸ್ಪೀಕರ್ ಖಾದರ್ ಪ್ರೋತ್ಸಾಹ ನೀಡಿದ ಘಟನೆ ವಿಧಾನಸಭೆ ಚರ್ಚೆ ವೇಳೆ ನಡೆಯಿತು.
ವಿಧಾನಸಭೆಯಲ್ಲಿ ಈಶ್ವರ್ ಮಾತನಾಡಲು ಎದ್ದು ನಿಂತಾಗ ಖಾದರ್ ಧೈರ್ಯ ತುಂಬಿ ʻಹೊಸದಾಗಿ ಶಾಸಕರಾದಾಗ ಮಾತನಾಡುವುದು ಸಹಜ. ಹೆದರಿಕೆ ಬೇಡ. ಧೈರ್ಯವಾಗಿ ಮಾತನಾಡಿʼ ಎಂದು ಕಿವಿಮಾತು ಹೇಳಿದರು.
ಮೊದಲ ಬಾರಿ ಆಯ್ಕೆಯಾದ ಶಾಸಕರಿಗೆ ಟ್ರೋಲ್ ಭಯವಿರಬಹುದು. ಟ್ರೋಲ್ ಮಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಾನು ಇಲ್ಲಿ ಇದ್ದೇನೆ ಅಂದ್ರೆ, ಅದಕ್ಕೆ ಟ್ರೋಲ್ ಮಾಡುವವರೇ ಕಾರಣ. ದೊಡ್ಡ ಸ್ಥಾನಕ್ಕೆ ಹೋಗಬೇಕೆಂದ್ರೆ ಟ್ರೋಲ್ ಮಾಡುವವರ ಪಾತ್ರ ಮುಖ್ಯ ಎಂದರು.