ಬೆಂಗಳೂರು, ಜು 12 (DaijiworldNews/MS): ರಾಜ್ಯದಲ್ಲಿ ಕೆಲವೆಡೆ ಉತ್ತಮ ಮುಂಗಾರು ಮಳೆಯಾಗುತ್ತಿದ್ದರೂ, ಇನ್ನು ಕೆಲವು ಜಿಲ್ಲೆಯಲ್ಲಿ ತೀವ್ರವಾಗಿ ಮಳೆ ಕೊರತೆಯಾಗಿದೆ. ಹೀಗಾಗಿ ರಾಣೇಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ನೇತೃತ್ವದ ತಂಡ ಖಾಸಗಿಯಾಗಿ ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಮಾಡಲು ಮುಂದಾಗಿದೆ.
ಭಾರತೀಯ ಹವಾಮಾನ ಇಲಾಖೆ ಮಳೆ ಕೊರೆತೆ ಇದೆ ಎಂದು ಹೇಳಿದೆ. ಮೋಡ ಬಿತ್ತನೆಯಿಂದ ಮಳೆಯಾಗಲಿದೆ ಎಂದ ವಿಜ್ಞಾನಿಗಳೇ ಹೇಳುತ್ತಿದ್ದು ಜಿಲ್ಲೆಯ ರೈತರಿಗಾಗಿ ನಾವು ಖಾಸಗಿಯಾಗಿ ಮೋಡ ಬಿತ್ತನೆಯನ್ನ ಮಾಡುತ್ತಿವೆ ಎಂದು ಪ್ರಕಾಶ್ ಕೋಳಿವಾಡ ಹೇಳಿದ್ದಾರೆ.
ಪ್ರಕಾಶ್ ಕೋಳಿವಾಡಗೆ ಅವರಿಗೆ ಸೇರಿದ ಪಿಕೆಕೆ ಎಂಬ ಎನ್ಜಿಓ ಮೋಡ ಬಿತ್ತನೆಗೆ ಜಿಲ್ಲಾಧಿಕಾರಿ ಮತ್ತು ಕಂದಾಯ ಇಲಾಖೆಯಿಂದ ಅನುಮತಿಪಡೆದುಕೊಂಡಿದ್ದು, ಕೇಂದ್ರ ವಿಮಾನಯಾನ ಇಲಾಖೆಯ ಅನುಮತಿ ಪಡೆದುಕೊಳ್ಳಲು ಈ ತಂಡ ಟೀಂ ರಾಜ್ಯ ರಾಜಧಾನಿಗೆ ತೆರಳಿದ್ದು, ದೆಹಲಿಯಲ್ಲಿ ಅನುಮತಿ ದೊರೆತ ಬಳಿಕ ಹಾವೇರಿಯಲ್ಲಿ ಮೋಡ ಬಿತ್ತನೆ, ನಡೆಯಲಿದೆ.