ನವದೆಹಲಿ, ಜು 10 (DaijiworldNews/HR): ಮಣಿಪುರದಲ್ಲಿ ಮತ್ತಷ್ಟು ಹಿಂಸಾಚಾರವನ್ನು ಹೆಚ್ಚಿಸಲು ಸುಪ್ರೀಂಕೋರ್ಟ್ ಅನ್ನು ವೇದಿಕೆಯಾಗಿ ಬಳಸಬಾರದು ಎಂದು ಸುಪ್ರೀಂಕೋರ್ಟ್ನ ಸಿಜೆಐ ಹೇಳಿದ್ದಾರೆ.
ಮಣಿಪುರ ಹಿಂಸಾಚಾರದ ಪಿಐಎಲ್ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ನಾವು ರಾಜ್ಯವು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಮೇಲ್ವಿಚಾರಣೆ ಮಾಡಬಹುದು. ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳಬಹುದಾದರೆ ಕೆಲವು ಆದೇಶಗಳನ್ನು ರವಾನಿಸಬಹುದು. ಆದರೆ ನಾವು ಭದ್ರತೆ ನೀಡುವ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್ ಮಣಿಪುರದ ಪರಿಸ್ಥಿತಿ ಉಲ್ಬಣಗೊಂಡಿದೆ ಎಂದು ಹೇಳಿದಾಗ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು, ನಿರ್ದಿಷ್ಟ ಸಲಹೆಯೊಂದಿಗೆ ಇಲ್ಲಿಗೆ ಬನ್ನಿ ಎಂದಿದ್ದಾರೆ.
ಇನ್ನು ನಿಮ್ಮ ಸಂದೇಹವು ನಮಗೆ ಕಾನೂನು ಮತ್ತು ಸುವ್ಯವಸ್ಥೆಯನ್ನು ವಹಿಸಿಕೊಳ್ಳಲು ಕಾರಣವಾಗುವುದಿಲ್ಲ. ಇದನ್ನು ಪಕ್ಷಾತೀತ ವಿಷಯವಾಗಿ ನೋಡಬೇಡಿ, ಇದು ಮಾನವೀಯ ಸಮಸ್ಯೆ. ನಾವು ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತೇವೆ ಆದರೆ ಈ ನ್ಯಾಯಾಲಯದ ಮುಂದೆ ವಾದ ಮಾಡುವುದಕ್ಕೆ ಕೆಲವು ವಿಧಾನಗಳು ಇರಬೇಕು ಎಂದು ಸಿಜೆಐ ಗೊನ್ಸಾಲ್ವೆಸ್ಗೆ ಹೇಳಿದ್ದಾರೆ.