ನವದೆಹಲಿ, ಜು.10 (DaijiworldNews/Ak) ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಗುಜರಾತ್ನ ಗಾಂಧಿನಗರಕ್ಷೇತ್ರದಿಂದ ರಾಜ್ಯಸಭೆಗೆ ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಗೋವಾ, ಗುಜರಾತ್ ಮತ್ತು ಪಶ್ಚಿಮ ಬಂಗಾಳದ 10 ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ಪ್ರಕಟಿಸಿದೆ.ಈ ಹಿನ್ನಲೆ ಇಂದು ಜೈಶಂಕರ್ ಅವರು ಗಾಂಧಿನಗರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಗೋವಾ, ಗುಜರಾತ್ ಮತ್ತು ಪಶ್ಚಿಮ ಬಂಗಾಳದ 10 ಸದಸ್ಯರು ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ನಿವೃತ್ತರಾಗುತ್ತಿರುವುದರಿಂದ ಜುಲೈ 24 ರಂದು ಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ
ಸದಸ್ಯರ ನಿವೃತ್ತಿಯಿಂದಾಗಿ ರಾಜ್ಯಸಭೆಯಲ್ಲಿ ತೆರವಾಗಲಿರುವ ಸ್ಥಾನಗಳಲ್ಲಿ ಪಶ್ಚಿಮ ಬಂಗಾಳದ ಡೆರೆಕ್ ಒಬ್ರೇನ್ ಮತ್ತು ಗುಜರಾತ್ನ ಎಸ್ ಜೈಶಂಕರ್ ಸೇರಿದ್ದಾರೆ. ತೆರವಾಗಿರುವ ರಾಜ್ಯಸಭಾ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಜುಲೈ 13 ಕೊನೆಯ ದಿನ.ಜುಲೈ 24ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.ವಿನಯ್ ಡಿ. ತೆಂಡೂಲ್ಕರ್ ಜುಲೈ 28 ರಂದು ನಿವೃತ್ತರಾಗಲಿರುವ ಕಾರಣ ಗೋವಾದಿಂದ ಒಂದು ರಾಜ್ಯಸಭಾ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಗುಜರಾತ್ನಿಂದ ಮೂರು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ದಿನೇಶ್ಚಂದ್ರ ಜೆಮಲ್ಭಾಯ್ ಅನವಾಡಿಯಾ, ಲೋ ಖಂಡವಾಲಾ ಜುಗಲ್ಸಿನ್ನಾ ಮಾಥುರ್ಜಿ, ಸುಬ್ರಹ್ಮಣ್ಯಂ ಜೈಶಂಕರ್ ಕೃಷ್ಣಸ್ವಾಮಿ ಅವರು ಆಗಸ್ಟ್ 18 ರಂದು ನಿವೃತ್ತರಾಗುತ್ತಿದ್ದಾರೆ.ಜೈಶಂಕರ್ ಅವರು 2019 ರಲ್ಲಿ ಗುಜರಾತ್ನಿಂದ ರಾಜ್ಯಸಭೆಗೆ ಆಯ್ಕೆಯಾದರು ಮತ್ತು ಮೇಲ್ಮನೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು 104 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ನ ಗೌರವ್ ಪಾಂಡ್ಯ 70 ಮತಗಳನ್ನು ಪಡೆದುಕೊಂಡಿದ್ದರು.
ಇತ್ತೀಚಿನ ರಾಷ್ಟ್ರೀಯ ಚುನಾವಣೆಯಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ಸ್ಮತಿ ಇರಾನಿ ಲೋಕಸಭೆಗೆ ಆಯ್ಕೆಯಾದ ನಂತರ ಗುಜರಾತ್ನಿಂದ ಎರಡು ಸ್ಥಾನಗಳು ತೆರವಾದವು. 182 ಸ್ಥಾನಗಳ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿಯ ಬಲ 156 ಇರುವುದರಿಂದ ಜೈಶಂಕರ್ ಗೆಲುವು ಖಚಿತವಾಗಿದೆ..
ಡೆರೆಕ್ ಒ'ಬ್ರಿಯಾನ್ ಡೋಲಾ ಸೇನ್ , ಪ್ರದೀಪ್ ಭಟ್ಟಾಚಾರ್ಯ, ಸುಶ್ಮಿತಾ ದೇವ್, ಶಾಂತಾ ಛೆಟ್ರಿ, ಸುಖೇಂದು ಶೇಖರ್ ರೇ ಅವರು ಆಗಸ್ಟ್ 18 ರಂದು ನಿವೃತ್ತರಾಗಲಿರುವುದರಿಂದ ಪಶ್ಚಿಮ ಬಂಗಾಳದಲ್ಲೂ ಆರು ರಾಜ್ಯಸಭಾ ಸ್ಥಾನಗಳಿಗೂ ಚುನಾವಣೆ ನಡೆಯಲಿದೆ.