ಬೆಂಗಳೂರು, ಜು 10 (DaijiworldNews/HR): ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದ ಹಿಂದೆ ಐಸಿಸ್ ಉಗ್ರರ ಕೈವಾಡ ಇದೆ ಎಂದು ಬಿಜೆಪಿ ಶಾಸಕ ಸಿದ್ದು ಸವದಿ ಆರೋಪ ಮಾಡಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಅವರನ್ನು ಚಿತ್ರಹಿಂಸೆ ನೀಡಿ ಕರೆಂಟ್ ಶಾಕ್ ಕೊಟ್ಟು ಕೊಂದಿದ್ದಾರೆ. ಇದರ ಹಿಂದೆ ಉಗ್ರಗಾಮಿಗಳ ಕೈವಾಡ ಇದೆ ಎಂದರು.
ಇನ್ನು ಭಯಾನಕ ಘಟನೆ ಭವಿಷ್ಯದಲ್ಲಿ ಕಾಣುವ ಆತಂಕ ಇದ್ದು, ಈ ಕೃತ್ಯದ ಹಿಂದೆ ಹಿಂದೆ ಐಸಿಸ್ ಉಗ್ರರ ಚಿತಾವಣೆ ಇದೆ. ಆದರೆ ಸರ್ಕಾರದ ನಡೆ ಸಂಶಯಾಸ್ಪದವಾಗಿದೆ. ಜೈನ ಮುನಿಗಳ ಹತ್ಯೆ ಪ್ರಕರಣದ ತನಿಖೆ ಸಿಬಿಐಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.