ಬೆಂಗಳೂರು, ಜು 7 (DaijiworldNews/MS): ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ವೇಳೆ ಭದ್ರತಾ ಲೋಪವಾಗಿದೆ.
ಶಾಸಕರಲ್ಲದ ವ್ಯಕ್ತಿಯೋರ್ವ ವಿಧಾನಸಭೆ ಪ್ರವೇಶಿಸಿ15 ನಿಮಿಷಗಳ ಕಾಲ ಸದನದಲ್ಲಿ ಕುಳಿತುಕೊಂಡಿದ್ದು ಬೆಳಕಿಗೆ ಬಂದಿದೆ. ದೇವದುರ್ಗ ಶಾಸಕಿ ಕರೆಯಮ್ಮ ಆಸನದಲ್ಲಿ ಕುಳಿತಿದ್ದು ಇದನ್ನುಗಮನಿಸಿದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರಿಗೆ ವ್ಯಕ್ತಿ ಬಗ್ಗೆ ಅನುಮಾನ ಬಂದಿದೆ. ಪ್ರಶ್ನಿಸಿದಾಗ ನಾನು ಮೊಳಕಾಲ್ಮೂರು ಶಾಸಕ ಎಂದು ಅನಾಮಿಕ ಹೇಳಿದ್ದಾನೆ. ಅಲ್ಲದೇ, ಡಿಸಿಎಂ ಡಿಕೆ ಶಿವಕುಮಾರ್ ಅವರ ಬಳಿ ತೆರಳಿ ಶೇಕ್ ಹ್ಯಾಂಡ್ ಕೂಡ ಮಾಡಿದ್ದಾನೆ
ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರು ಮಾರ್ಷಲ್ಗಳ ಗಮನಕ್ಕೆ ಸ್ಪೀಕರ್ ಯುಟಿ ಖಾದರ್ ಅವರ ಗಮನಕ್ಕೆ ತಂದಿದ್ದಾರೆ. ಇಷ್ಟೊಂದು ಭದ್ರತೆ ನಡುವೆಯೂ ಆ ವ್ಯಕ್ತಿ ಹೇಗೆ ಸದನದೊಳಗೆ ಪ್ರವೇಶಿಸಿದ್ದ ಅಂತೆಲ್ಲ ಪ್ರಶ್ನೆಗಳು ಉದ್ಭವಿಸಿವೆ.
ಸದ್ಯ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ಈತನ ಮೊಳಕಾಲ್ಮೂರು ತಿಪ್ಪೇರುದ್ರ ಎಂದು ತಿಳಿದುಬಂದಿದೆ.