ಭೋಪಾಲ್, ಜು 06 (DaijiworldNews/HR): ಮಧ್ಯಪ್ರದೇಶದಲ್ಲಿ ಬುಡಕಟ್ಟು ಸಮುದಾಯದ ಕಾರ್ಮಿಕರೊಬ್ಬರ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜಿಸಿದ ಘಟನೆ ನಡೆದಿದ್ದು, ಇದೀಗ ಆ ವ್ಯಕ್ತಿಯನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕರೆದು ಪಾದಪೂಜೆ ಮಾಡಿದ್ದಾರೆ.
ಬುಡಕಟ್ಟು ಸಮಾಜದ ಕಾರ್ಮಿಕ ದಶ್ಮೇಶ್ ರಾವತ್ ಅವರನ್ನು ಚೌಹಾಣ್ ಅವರು ತಮ್ಮ ನಿವಾಸಕ್ಕೆ ಕರೆಸಿ ಬಳಿಕ ಆತನ ಪಾದಪೂಜೆ ಮಾಡಿ ಸನ್ಮಾನಿಸಿದ್ದಾರೆ.
ಇನ್ನು ‘ನಿಮ್ಮ ವಿಡಿಯೋ ನೋಡಿ ನನಗೆ ಬೇಸರವಾಯಿತು. ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ, ನಿಮ್ಮಂತಹ ಜನರು ನನಗೆ ದೇವರಂತೆ’ ಎಂದರು.
ಸಿಧಿ ಜಿಲ್ಲೆಯಲ್ಲಿ ಪ್ರವೇಶ್ ಶುಕ್ಲಾ ಎಂಬಾತ ದಶ್ಮೇಶ್ ರಾವತ್ ಎಂಬ ಕಾರ್ಮಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿ ಅದನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದ. ಇದು ವೈರಲ್ ಆಗಿತ್ತು. ಪ್ರವೇಶ ಶುಕ್ಲಾನನ್ನು ಮಂಗಳವಾರ ತಡರಾತ್ರಿ ಬಂಧಿಸಲಾಗಿತ್ತು.