ಚೆನ್ನೈ, ಜು 5 (DaijiworldNews/MS): ಟೊಮೆಟೊ ಬೆಲೆಯಲ್ಲಿ ಭಾರೀ ಏರಿಕೆಯಾದ ತಮಿಳುನಾಡು ಸರ್ಕಾರ ನ್ಯಾಯಬೆಲೆ ಅಂಗಡಿಗಳಲ್ಲಿ ಸಬ್ಸಿಡಿ ದರದಲ್ಲಿ ಟೊಮೆಟೊ ವಿತರಣೆ ಆರಂಭಿಸಿದೆ.
ಟೊಮೆಟೊ ಬೆಲೆ ಹಲವೆಡೆ ಈಗ 150 ರೂ. ತಲುಪಿದ್ದು, ಪಡಿತರ ಅಂಗಡಿಗಳಲ್ಲಿ ಕೆ.ಜಿಗೆ 60ರೂ.ವಿನಂತೆ ಟೊಮೆಟೊ ಮಾರಾಟ ಮಾಡಲಾಗುತ್ತಿದೆ.
ಟೊಮೆಟೊ ಮಾತ್ರವಲ್ಲದೇ ಎಲ್ಲಾ ತರಕಾರಿಗಳ ಬೆಲೆ ಏರಿಕೆಯಾಗಿದ್ದು, ಕ್ಯಾರೆಟ್, ಬೀನ್ಸ್ ಬೆಲೆ 100 ರೂ. ಗಡಿ ದಾಟಿದೆ.
"ಇಂದಿನಿಂದ ಪಡಿತರ ಅಂಗಡಿಗಳಲ್ಲಿ ಟೊಮೇಟೊ ಕೆಜಿಗೆ 60 ರೂ.ಗೆ ಮಾರಾಟವಾಗುತ್ತಿದ್ದು, ಮಾರುಕಟ್ಟೆಯಲ್ಲಿ ಕೆಜಿಗೆ 100-130 ರೂ.ಗೆ ಲಭ್ಯವಿದ್ದು, ಸರಕಾರ ಅರ್ಧ ಬೆಲೆಗೆ ಮಾರಾಟ ಆರಂಭಿಸಿರುವುದು ನಮಗೆ ಸಂತಸ ತಂದಿದೆ ಎನ್ನುತ್ತಾರೆ" ತಮಿಳುನಾಡಿನ ಪಡಿತರ ಅಂಗಡಿಯಲ್ಲಿ ಟೊಮೊಟೊ ಖರೀದಿಸಿದ ಬೇಬಿ. ಈ ಉತ್ತಮಕ್ರಮಕ್ಕಾಗಿ ನಾವು ನಮ್ಮ ರಾಜ್ಯ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇವೆ.