ಮಧ್ಯಪ್ರದೇಶ,ಏ02(AZM):ಬಿಜೆಪಿ ನಾಯಕನ ಮನೆಗೆ ಪೊಲೀಸರು ದಾಳಿ ಮಾಡಿ ಮನೆಯಲ್ಲಿ ಶೇಖರಿಸಿಡಲಾದ ಶಸ್ತಾಸ್ತ್ರಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.
ಮಧ್ಯ ಪ್ರದೇಶದ ಬಿಜೆಪಿ ನಾಯಕ ಸಂಜಯ್ ಯಾದವ್ ಮನೆಗೆ ದಾಳಿ ನಡೆಸಿದ ಪೊಲೀಸರು, 17 ಬಾಂಬ್ ಗಳು, 10 ಪಿಸ್ತೂಲ್ ಗಳು ಮತ್ತು 111 ಬುಲೆಟ್ ಗಳನ್ನು ಪತ್ತೆಹಚ್ಚಿದ್ದಾರೆ. ಅಲ್ಲದೆ ಸಂಜಯ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ.
"ಮನೆಯ ಅಲ್ಮೇರಾದಲ್ಲಿದ್ದ ದೊಡ್ಡ ಪೆಟ್ಟಿಗೆಯೊಂದರಲ್ಲಿ ಬಾಂಬ್, ಪಿಸ್ತೂಲ್ ಗಳು ಪತ್ತೆಯಾಗಿವೆ. ಈ ಶಸ್ತ್ರಾಸ್ತ್ರಗಳನ್ನು ಏಕೆ ಶೇಖರಿಸಿಡಲಾಗಿತ್ತು ಎನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ವಿವಿಧ ಸೆಕ್ಷನ್ ಗಳಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ಯಾಂಗ್ಚೆನ್ ದೋಲ್ಕರ್ ಭುಟಿಯಾ ಮಾಹಿತಿ ನೀಡಿದ್ದಾರೆ.