ಬೆಂಗಳೂರು, ಜೂ 03 (DaijiworldNews/HR): ಮುಖ್ಯಮಂತ್ರಿಗಳ ಕಚೇರಿಗೆ ಶಾಸಕರ ಲೆಟರ್ ತೆಗೆದುಕೊಂಡು ಹೋದ್ರೆ 30 ಲಕ್ಷ ಕೇಳ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕರ ಲೆಟರ್ ತೆಗೆದುಕೊಂಡು ಸಿಎಂ ಕಚೇರಿಗೆ ಹೋದ್ರೆ 30 ಲಕ್ಷ ಕೊಡಬೇಕು ಅಂತಾರೆ. ಇಂದು ಸಿಎಂ ಕಚೇರಿ ಎಲ್ಲಿಗೆ ಬಂದಿದೆ ಅಂತ ಜನ ಮಾತಾಡ್ತಿದ್ದಾರೆ ಎಂದರು.
ಇನ್ನು ನಾನು ಎರಡು ಬಾರಿ ಆಕ್ಸಿಡೆಂಟ್ ಆಗಿ ಸಿಎಂ ಆದೆ. ಜನರಿಂದ ನಾನು ಸಿಎಂ ಆಗಿಲ್ಲ. ಕಾಂಗ್ರೆಸ್ ಅವರು ಎರಡು ವರ್ಷ ಬೀದಿ ಬೀದಿಯಲ್ಲಿ ಜಾಗಟೆ ಬಾರಿಸಿದ್ರಿ. 40% ಅಂದ್ರಿ ಅದಕ್ಕೆ ಡಾಕ್ಯುಮೆಂಟ್ ಇಟ್ಡಿದ್ದೀರಾ ಎಂದು ಪ್ರಶ್ನಿಸಿದರು.
ನಾನು ವಿರೋಧ ಪಕ್ಷದ ನಾಯಕನಾಗಿ ಟೀಕೆ ಮಾಡ್ತಿಲ್ಲ. ನಾನು 5 ಬಾರಿ ಶಾಸಕ ಆಗಿದ್ದೇನೆ. ಚುನಾವಣೆ ವೇಳೆ ವೀರಾವೇಶದಲ್ಲಿ ಜನರಿಗೆ ಕೊಟ್ಟ ಮಾತೇನು?. ಈಗ ನೀವು ಕೊಟ್ಟಿರೋ ಗ್ಯಾರಂಟಿ ಏನು. ಎಲ್ಲವೂ ಕಣ್ಣ ಮುಂದೆ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.