ನವದೆಹಲಿ, ಜು 3 (DaijiworldNews/AK) : ಭಾರತದಲ್ಲಿ ಮೇ ತಿಂಗಳಲ್ಲಿ 65 ಲಕ್ಷಕ್ಕೂ ಹೆಚ್ಚು ವಾಟಪ್ಸ್ ಖಾತೆಯನ್ನು ಬ್ಯಾನ್ ಮಾಡಲಾಗಿದೆ ಎಂದು ಮೆಟಾ ಒಡೆತನದ ವಾಟ್ಸಪ್ ಕಂಪೆನಿ ತಿಳಿಸಿದೆ. 2021ರ ಹೊಸ ಐಟಿ ನಿಯಮಗಳ ಅನುಗುಣವಾಗಿ 65 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬ್ಯಾನ್ ಮಾಡಿದೆ ಎಂದು ಕಂಪನಿ ಭಾನುವಾರ ಹೇಳಿದೆ.
ಈ ಹಿಂದೆ ಕೂಡ ಮೇ ತಿಂಗಳಲ್ಲಿ 6,508,000 ವಾಟ್ಸಪ್ ಖಾತೆಗಳನ್ನು ಮತ್ತು 2,420,700 ಈ ಖಾತೆಗಳನ್ನು ನಿಷೇಧಿಸಿದೆ ಎಂದು ಮಾಹಿತಿ ನೀಡಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಭಾರತದಲ್ಲಿ 500 ಮಿಲಿಯನ್ಗಿಂತಲೂ ಹೆಚ್ಚು ವಾಟ್ಸಪ್ ಬಳಕೆದಾರರನ್ನು ಹೊಂದಿದ್ದು, 74 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬ್ಯಾನ್ ಮಾಡಿತ್ತು.
ಲಕ್ಷಾಂತರ ಭಾರತೀಯರ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಕೇಂದ್ರವು ಇತ್ತೀಚೆಗೆ ಕುಂದುಕೊರತೆ ಮೇಲ್ಮನವಿ ಸಮಿತಿ ಅನ್ನು ಪ್ರಾರಂಭಿಸಿತು. ಈ ಹೊಸದಾಗಿ ರಚಿಸಲಾದ ಸಮಿತಿಯು ಬಿಗ್ ಟೆಕ್ ಕಂಪನಿಗಳನ್ನು ಪಳಗಿಸಲು, ದೇಶದ ಡಿಜಿಟಲ್ ಕಾನೂನುಗಳನ್ನು ಬಲಪಡಿಸಲು ಮುಂದಾಗಿದೆ.