ಚಿತ್ರದುರ್ಗ, ಜೂ 30 (DaijiworldNews/HR): ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಮೃತ ಸನ್ಯಾಸಿ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದ್ದು, ಭಾರೀ ಅನುಮಾನಕ್ಕೆ ಕಾರಣವಾಗಿದೆ.
ಗಂಗಾಧರ ಶಾಸ್ತ್ರಿ (70) ವಾರದ ಹಿಂದೆ ಮೃತಪಟ್ಟಿದ್ದು, ಇವರ ಮನೆಯಲ್ಲಿ ಇದೀಗ 30 ಲಕ್ಷ ಹಣ ಪತ್ತೆಯಾಗಿದೆ.
ಇನ್ನು ಗಂಗಾಧರ ಶಾಸ್ತ್ರಿ ಅವರು ಶಾಸ್ತ್ರ ಹೇಳುವುದು, ಶುಭ ಕಾರ್ಯದ ಪೂಜೆ ಮಾಡಿಸುತ್ತಿದ್ದರು. 16 ಎಕರೆ ಜಮೀನಿದ್ದು 4 ಎಕರೆ ತೆಂಗಿನ ತೋಟ, ಗದ್ದೆಯನ್ನು ಹೊಂದಿದ್ದರು.
ಭಕ್ತರಿಂದ ಬಂದ ಕಾಣಿಕೆ ಹಣವೇ 46 ಸಾವಿರ ರೂ. ಹೆಚ್ಚಿದ್ದು, ಒಟ್ಟಿನಲ್ಲಿ ಕೃಷಿ ಮತ್ತಿತರೆ ಆದಾಯದಿಂದ ಬಂದ 30 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ.