ಮಣಿಪುರ, ಜೂ 29 (DaijiworldNews/HR): ಮಣಿಪುರದ ಚುರಾಚಂದ್ಪುರಕ್ಕೆ ಹೊರಟಿದ್ದ ರಾಹುಲ್ ಗಾಂಧಿಯವರ ಬೆಂಗಾವಲನ್ನು ಭದ್ರತಾ ಕಳವಳದ ಕಾರಣಕ್ಕೆ ಇಂಫಾಲ್ ನಿಂದ 20 ಕಿಲೋಮೀಟರ್ ದೂರದಲ್ಲಿರುವ ಬಿಷ್ಣುಪುರದಲ್ಲಿ ನಿಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಣಿಪುರ ಹಿಂಸಾಚಾರದಿಂದ ಹೆಚ್ಚು ತತ್ತರಿಸಿರುವ ಚುರಚಂದಪುರ ಜಿಲ್ಲೆಗೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬೆಂಗಾವಲು ಪಡೆ ವಾಹನವನ್ನು ರಾಜ್ಯದ ಪೊಲೀಸರು ಇಂದು ತಡೆಹಿಡಿದಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಪೊಲೀಸರು ನಮಗೆ ಏಕೆ ಅವಕಾಶ ನೀಡುತ್ತಿಲ್ಲ ಎಂದು ನನಗೆ ತಿಳಿದಿಲ್ಲ. ಪೀಡಿತ ಜನರನ್ನು ಮಾತ್ರ ಭೇಟಿಯಾಗುವುದು ರಾಹುಲ್ ಗಾಂಧಿಯವರ ಉದ್ದೇಶವಾಗಿದೆ. ನಾವು ಸುಮಾರು 20-25 ಕಿ.ಮೀ ಪ್ರಯಾಣಿಸಿದ್ದೇವೆ. ಆದರೆ ಎಲ್ಲಿಯೂ ರಸ್ತೆ ನಿರ್ಬಂಧಗಳಿರಲಿಲ್ಲ. ರಾಹುಲ್ ಗಾಂಧಿ ಕಾರಿನೊಳಗೆ ಕುಳಿತಿದ್ದಾರೆ. ಸ್ಥಳೀಯ ಪೊಲೀಸರಿಗೆ ಯಾರು ಸೂಚನೆ ನೀಡಿದ್ದಾರೆಂದು ನನಗೆ ತಿಳಿದಿಲ್ಲ ಎಂದಿದ್ದಾರೆ.
ಇನ್ನು ಚುರಾಚಂದ್ಪುರದವರೆಗೆ ರಸ್ತೆ ಮೂಲಕ ಪ್ರಯಾಣಿಸುವ ಬದಲು ಹೆಲಿಕಾಪ್ಟರ್ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳು ಕಾಂಗ್ರೆಸ್ ಮುಖಂಡರನ್ನು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ನಾವು ಅಂತಹ ಘಟನೆಗಳನ್ನು ಪುನರಾವರ್ತಿಸಲು ಬಯಸುವುದಿಲ್ಲ. ಆದ್ದರಿಂದ ಮುನ್ನೆಚ್ಚರಿಕೆಯಾಗಿ, ಬಿಷ್ಣುಪುರದಲ್ಲಿ ಸ್ಥಗಿತಗೊಳ್ಳುವಂತೆ ಬೆಂಗಾವಲು ಪಡೆಯನ್ನು ಕೋರಿದ್ದೇವೆ" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.