ಬೆಂಗಳೂರು, ಏ 02 (MSP): ಏಪ್ರಿಲ್ ತಿಂಗಳಿನಲ್ಲಿ ಸಾಲು ಸಾಲು ರಜೆಗಳು ಬಂದಿರುವ ಕಾರಣ ಒಟ್ಟು 10 ದಿನ ಬ್ಯಾಂಕ್ ರಜೆ ಇರಲಿದೆ.
ಮಾರ್ಚ್ 31ರಂದು ಆರ್ಥಿಕ ವರ್ಷದ ಕೊನೆಯ ದಿನವಾಗಿದ್ದು ಆ ದಿನ ಭಾನುವಾರದ ಕಾರಣ ಅಂದು ಬ್ಯಾಂಕ್ ಕಾರ್ಯನಿರ್ವಹಿಸಿತ್ತು. ಈ ಹಿನ್ನಲೆಯಲ್ಲಿ ಏಪ್ರಿಲ್ 1ರಂದು ಎಲ್ಲಾ ಬ್ಯಾಂಕ್ಗಳ ಶಾಖೆಗಳು ಮುಚ್ಚಿದೆ. ಏ. 6ರಂದು ಯುಗಾದಿ ಹಬ್ಬದ ರಜೆ. ಏ.7ರಂದು ಭಾನುವಾರ, ಏ.13 ರಂದು ರಾಮ ನವಮಿ ಮತ್ತು 2ನೇ ಶನಿವಾರ ಹಿನ್ನಲೆಯಲ್ಲಿ ಬ್ಯಾಂಕ್ ಗೆ ರಜೆ ಇದೆ.
ಇದಲ್ಲದೆ ಏ. 14 ರಂದು ಭಾನುವಾರ, ಅಂಬೇಡ್ಕರ್ ಜಯಂತಿ ರಜೆ. ಏ.17ರಂದುಮಹಾವೀರ ಜಯಂತಿ ರಜೆ, ಏ.19ರಂದು ಗುಡ್ ಫ್ರೈಡೇ ರಜೆ, ಏ. 21ರಂದು ಭಾನುವಾರ , ಏ.28ರಂದು ಭಾನುವಾರ ರಜೆ ಇದೆ.
ಈ ಎಲ್ಲಾ ದಿನಗಳಲ್ಲಿ ಬ್ಯಾಂಕ್ ರಜೆ ಇರುವುದರಿಂದ ಬ್ಯಾಂಕ್ ಗೆ ಹೋಗೋ ಮುನ್ನ ಚಿಂತಿಸಿ ಅಗತ್ಯವಿರುವ ಹಣಕ್ಕಾಗಿ, ಬ್ಯಾಂಕ್ ವ್ಯವಹಾರಗಳಿಗೆ ಮುಂಚಿತವಾಗಿ ಪ್ಲಾನ್ ರೂಪಿಸಿಕೊಳ್ಳುವುದು ಉತ್ತಮ.