ಮುಂಬೈ, ಜೂ 27 (DaijiworldNews/MS): ಪಿಂಕ್ ವಾಟ್ಸ್ಆ್ಯಪ್ ಸ್ಕ್ಯಾಮ್ ಬಗ್ಗೆ ಬಳಕೆದಾರರು ಎಚ್ಚರಿಕೆ ವಹಿಸಬೇಕೆಂದು ತಜ್ಞರು ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಪಿಂಕ್ ವಾಟ್ಸ್ಆ್ಯಪ್ ಮತ್ತೆ ಕಾಣಿಸಿಕೊಂಡಿದ್ದು, ಕೆಲವು ದಿನಗಳಿಂದ ಅನೇಕರಿಗೆ ವಾಟ್ಸ್ಆ್ಯಪ್ ಅಪ್ಡೇಟ್ ಹೆಸರಿನಲ್ಲಿ ಫಾರ್ವರ್ಡ್ ಮೆಸೇಜ್ ಹರಿದಾಡುತ್ತಿದೆ.
ಇದು ವಾಟ್ಸ್ಆ್ಯಪ್ನ ಹೊಸ ಆವೃತ್ತಿ, ಇದರಲ್ಲಿ ಅನೇಕ ವಿಶೇಷ ಫೀಚರ್ಗಳಿವೆಕೂಡಲೇ ಡೌನ್ಲೋಡ್ ಮಾಡಿ” ಎಂಬ ಮೆಸೇಜ್ ಕೂಡ ಇರುತ್ತದೆ. ಇದನ್ನು ನಂಬಿ ಕ್ಲಿಕ್ ಮಾಡಿದಾಗ ಇದರಲಿದ್ದ ಇನ್ಸ್ಸ್ಟಾಲೇಷನ್ ಲಿಂಕ್ ಇದ್ದು, ಅದನ್ನು ಒತ್ತಿದ ಕೂಡಲೇ ವೈರಸ್ ಕಾಣಿಸಿಕೊಂಡು ಹ್ಯಾಕ್ ಆಗಲಿದೆ.
ಬಳಕೆದಾರರ ಒಟಿಪಿ, ಸಂಪರ್ಕ ಸಂಖ್ಯೆ, ಫೋಟೊ, ಬ್ಯಂಕ್ ಮಾಹಿತಿ ಸೇರಿದಂತೆ ಮೊಬೈಲ್ನಲ್ಲಿರುವ ಎಲ್ಲ ಡೇಟಾ ಹ್ಯಾಕ್ ಆಗಲಿದೆ. ಹೀಗಾಗಿ, ಯೂಸರ್ ವಾಟ್ಸಾಪ್ ಲಿಂಕ್ ಸ್ಕ್ಯಾಮ್ ಬಗ್ಗೆ ಜಾಗೃತರಾಗಿರಬೇಕೆಂದು ತಜ್ಞರು ಎಚ್ಚರಿಸಿದ್ದಾರೆ.