ವಿಜಯಪುರ/ಬಾಗಲಕೋಟೆ, ಜೂ 27 (DaijiworldNews/HR): ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮಾಜಿ ಸಚಿವ ಮುರುಗೇಶ್ ನಿರಾಣಿ ನಡುವಿನ ಅಂತರ್ಯುದ್ಧ ಮುಂದುವರೆದಿದ್ದು, ಇತ್ತ ಬಾಗಲಕೋಟೆ ಮತ್ತು ವಿಜಯಪುರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯ ವೇದಿಕೆಯಲ್ಲಿ ಜಟಾಪಟಿ ನಡೆದು ಪರಸ್ಪರ ಸವಾಲು ಹಾಕಿಕೊಂಡಿರುವ ಘಟನೆ ನಡೆದಿದೆ.
ಬಾಗಲಕೋಟೆಯಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಭಾಷಣಕ್ಕೆ ಕಾರ್ಯಕರ್ತರು ಅಡ್ಡಿಪಡಿಸಿದರೆ ವಿಜಯಪುರದ ಸಮಾವೇಶಕ್ಕೆ ಅಲ್ಲಿನ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಬಂದಿರಲಿಲ್ಲ.
ಇನ್ನು ಬಾಗಲಕೋಟೆಯಲ್ಲಿ ನಡೆದ ಸಭೆಯಲ್ಲಿ ಮುರುಗೇಶ್ ನಿರಾಣಿಯವರು ಮಾತನಾಡಲು ಎದ್ದು ನಿಂತಾಗ ಕೆಲವು ಕಾರ್ಯಕರ್ತರು ಆಕ್ಷೇಪದ ಧ್ವನಿ ಎತ್ತಿದ್ದು, ತಮಗೆ ಮಾತನಾಡಲು ಬಿಡಿ ಎಂದು ಆಕ್ರೋಶದಿಂದ ಹೇಳಿದರು. ಇದನ್ನು ನಿರಾಣಿ ಅಸಹಾಯಕರಾಗಿ ನೋಡಿದರೆ ಅಲ್ಲೇ ಇದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೊನೆಯವರೆಗೂ ಮೌನವಾಗಿಯೇ ನೋಡಿದರು.
ವಿಜಯಪುರದಲ್ಲಿ ಸಂಜೆ ಮೂರು ಗಂಟೆಗೆ ಆರಂಭವಾಗಬೇಕಾಗಿದ್ದ ಸಭೆ ಆರು ಗಂಟೆಯಾದರೂ ಆರಂಭವಾಗಲಿಲ್ಲ. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಭೆಗೆ ಬಂದಿರಲೇ ಇಲ್ಲ.
ಸಂಜೆ ಆರು ಗಂಟೆಯವರೆಗೂ ಗೀತ ಗಾಯನದ ಹೆಸರಿನಲ್ಲಿ ಕಾರ್ಯಕ್ರಮ ಮುಂದುವರಿಸಲಾಗಿದ್ದು, ಶಾಸಕಿ ಶಶಿಕಲಾ ಜೊಲ್ಲೆ ಅವರು ಮಾತನಾಡಲು ಶುರು ಮಾಡಿದರು. ಈ ವೇಳೆ ವಿಜಯಪುರದಿಂದ ಮುಂದಿನ ಬಾರಿಯೂ ರಮೇಶ್ ಜಿಗಜಿಣಗಿ ಅವರನ್ನು ಗೆಲ್ಲಿಸಬೇಕು ಎಂದು ಶಶಿಕಲಾ ಹೇಳಿದ್ದು ಯತ್ನಾಳ್ ಬೆಂಬಲಿಗರನ್ನು ಕೆರಳಿಸಿ ಮಾತಿನ ಚಕಮಕಿ ನಡೆದಿದೆ.