ಕೇರಳ, ಜೂ 26 (DaijiworldNews/HR): ಕೇರಳದ ವಂದೇ ಭಾರತ್ ರೈಲಿನಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಟಿಕೆಟ್ ಇಲ್ಲದೇ ಹತ್ತಿ ಬಳಿಕ ರೈಲಿನ ವಾಶ್ರೂಮ್ಗೆ ಹೋಗಿ ಬಾಗಿಲು ಹಾಕಿಕೊಂಡು ಕುಳಿತು ಹೊರ ಬರಲು ನಿರಾಕರಿಸಿರುವ ಘಟನೆ ವರದಿಯಾಗಿದೆ.
ಅಧಿಕಾರಿಗಳು ಎಷ್ಟೇ ಪ್ರಯತ್ನ ಪಟ್ಟರೂ ಆತ ಬಾಗಿಲು ಚಿಲಕ ತೆಗೆಯದೇ ಹಠ ಹಿಡಿದು ವ್ಯಕ್ತಿ ಕೂತಿದ್ದು, ಕೇರಳಕ್ಕೆ ಹೊರಟಿದ್ದ ರೈಲು ಪಾಲಕ್ಕಾಡ್ನ ಶೋರನೂರ್ ನಿಲ್ದಾಣ ತಲುಪಿದಾಗ, ಅಧಿಕಾರಿಗಳು ವಾಶ್ರೂಮ್ನ ಬಾಗಿಲು ಮುರಿದಿದ್ದಾರೆ.
ಇನ್ನು ಟಿಕೆಟ್ ಇಲ್ಲದೇ ಒಳ ಕುಳಿತು ಸತಾಯಿಸಿದ್ದ ವ್ಯಕ್ತಿಯನ್ನು ಹೊರತೆ ಕರೆದೊಯ್ದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟಿಕೆಟ್ ಪಡೆಯದೇ ರೈಲು ಏರಿದ್ದ ವ್ಯಕ್ತಿಯನ್ನು ರೈಲ್ವೆ ರಕ್ಷಣಾ ಪಡೆ ಅಧಿಕಾರಿಗಳು ವಾಶ್ ರೂಮ್ನಿಂದ ಹೊರಕ್ಕೆ ಕರೆದೊಯ್ದು ವಿಚಾರಣೆ ಮಾಡಿದ್ದಾರೆ. ಈ ವೇಳೆ ಅಧಿಕಾರಿಗಳಿಗೆ ಆತ ಸುಳ್ಳು ಹೇಳಲು ಪ್ರಯತ್ನಿಸಿದ್ದು, ಬಳಿಕ ಟಿಕೆಟ್ ಇಲ್ಲದೇ ಹತ್ತಿರುವುದಾಗಿ ಒಪ್ಪಿಕೊಂದಿದ್ದಾನೆ.