ನವದೆಹಲಿ, ಜೂ 23 (DaijiworldNews/MS): ಹೆಚ್ಚುವರಿ ಅಕ್ಕಿಯನ್ನು ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಪಿಯೂಶ್ ಗೋಯಾಲ್ ನೇರವಾಗಿ ಹೇಳಿದ್ದರೆ ಎಂದು ಕೆ.ಹೆಚ್ ಮುನಿಯಪ್ಪ ಅವರು ಹೇಳಿದ್ದಾರೆ.
ಅವರು ಇಂದು ನವದೆಹಲಿಗೆ ತೆರಳಿ ಕೇಂದ್ರ ಸಚಿವ ಪಿಯೂಶ್ ಗೋಯಾಲ್ ಅವರನ್ನು ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿ, "ಉಚಿತ ಅಕ್ಕಿ ಯೋಜನೆ ರಾಜ್ಯದಲ್ಲಿ ಜಾರಿ ಮಾಡಲು ಅಕ್ಕಿಗಾಗಿ ಕೇಂದ್ರಕ್ಕೆ ಮಾಡಿದ ಮನವಿಯನ್ನು ನಿರಾಕರಿಸಿರುವುದು ರಾಜಕೀಯ ದುರುದ್ದೇಶ" ಎಂದು ಆರೋಪಿಸಿದ್ದಾರೆ.
ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ಪೂರೈಸಲು ಸಾಧ್ಯವಿಲ್ಲ, ಹಣ ಕೊಡುತ್ತೇವೆಂದರೂ ಅಕ್ಕಿ ಪೂರೈಸಲು ಕೇಂದ್ರ ನಿರಾಕರಿಸಿದೆ. ಎಷ್ಟೇ ಕಷ್ಟ ಆದರೂ ನೀಡಿರುವ ಭರವಸೆಯಂತೆ ರಾಜ್ಯದ ಜನರಿಗೆ ಅಕ್ಕಿ ಕೊಟ್ಟೇ ತೀರುತ್ತೇವೆ. ಕೇಂದ್ರದ ಕ್ರಮ ಇದು ರಾಜಕೀಯದಿಂದ ಕೂಡಿದ್ದು, ಇದು ಬೇಸರವಾಗಿದೆ ಎಂದು ತಿಳಿಸಿದ್ದಾರೆ