ಬೆಂಗಳೂರು,ಜೂ 22 (DaijiworldNews/MS): ವಿದ್ಯುತ್ ದರ ಏರಿಕೆ ಖಂಡಿಸಿ ಕರ್ನಾಟಕ ಬಂದ್ಗೆ ಇಂದು ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೊ (KCC&I) ಕರೆ ನೀಡಿದೆ.
ಕರ್ನಾಟಕ ಬಂದ್ಗೆ ಕರೆ ನೀಡಿರುವ ಹಿನ್ನೆಲೆ ಇಂದು ರಾಜ್ಯಾದ್ಯಂತ ಕೈಗಾರಿಕೆಗಳು ಬಂದ್ ಇರಲಿವೆ. ಕೆಸಿಸಿ&ಐ ಹಾಗೂ ಇತರ ಎಲ್ಲಾ ಜಿಲ್ಲಾ ವಾಣಿಜ್ಯ ಮಂಡಳಿಯಿಂದ ಬಂದ್ಗೆ ಕರೆ ನೀಡಿಲಾಗಿದೆ. ಹೀಗಾಗಿ ಎಲ್ಲಾ ವ್ಯಾಪಾರ ಹಾಗೂ ಕೈಗಾರಿಕೆಗಳನ್ನು ಇಂಡಸ್ಟ್ರಿಗಳು ಸ್ತಬ್ಧಗೊಳಿಸಲಿವೆ. ಬಂದ್ಗೆ 25ಕ್ಕೂ ಹೆಚ್ಚು ಜಿಲ್ಲಾ ಚೇಂಬರ್ಗಳಿಂದ ಬೆಂಬಲ ದೊರಕಿದೆ.
ದಕ್ಷಿಣ ಕರ್ನಾಟಕ ಸಂಸ್ಥೆಗಳು ಈ ಬಂದ್ ನಲ್ಲಿ ಭಾಗವಹಿಸುತ್ತಿಲ್ಲ. ದಕ್ಷಿಣ ಕರ್ನಾಟಕದ FKCCI ಬಂದ್ ನಲ್ಲಿ ಭಾಗವಹಿಸುತ್ತಿಲ್ಲ ಎಂದು ಮೊದಲೇ ಸ್ಪಷ್ಟಪಡಿಸಿತ್ತು.
ಮೈಸೂರು, ಬೀದರ್, ಹುಬ್ಬಳ್ಳಿ ಯಾದಗಿರಿ ಉತ್ತರಕನ್ನಡ, ಹಾವೇರಿ ಮುಂತಾದೆಡೆ ವಾಣಿಜ್ಯ ವಹಿವಾಟು ಸ್ಥಗಿತಗೊಳ್ಳಲಿದ್ದು ಕೊಡಗು , ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಂದ್ ಗೆ ಬೆಂಬಲ ಇಲ್ಲ. ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಬಂದ್ಗೆ ಉತ್ತಮ ಸ್ಪಂದನೆ ಸಿಕ್ಕಿದ್ದು ಸ್ವಯಂ ಪ್ರೇರಿತವಾಗಿ ಕಾರವಾರದ ಮಾರುಕಟ್ಟೆ ಬಂದ್ ಮಾಡಲಾಗಿದೆ.