ಜೈಪುರ, ಜೂ 21 (DaijiworldNews/MS): ಹ್ಯಾಂಡ್ ಪಂಪ್ ರಿಪೇರಿ ವೇಳೆ ಪೈಪ್ ಹೈಟೆನ್ಷನ್ ಲೈನ್ಗೆ ತಗುಲಿ ಇಬ್ಬರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿ, ನಾಲ್ವರಿಗೆ ಸುಟ್ಟ ಗಾಯಗಳಾದ ಘಟನೆ ರಾಜಸ್ಥಾನದ ಧೋಲ್ಪುರ ಜಿಲ್ಲೆಯಲ್ಲಿ ನಡೆದಿದೆ.
ಮಂಗಳವಾರ ಸಂಜೆ ನದಾನಪುರದಲ್ಲಿ ಈ ಘಟನೆ ನಡೆದಿದ್ದು, ಬಸೇಡಿ ಉಪವಿಭಾಗದ ವಿಜಯ ಕಾ ಪುರ ಗ್ರಾಮದಲ್ಲಿ ಹ್ಯಾಂಡ್ ಪಂಪ್ ದುರಸ್ತಿ ಕಾರ್ಯ ನಡೆಯುತ್ತಿತ್ತು. ಈ ವೇಳೆ ಕಾರ್ಮಿಕರು ಎಳೆದ ಪೈಪ್ ಮೇಲಿನಿಂದ ಹಾದು ಹೋಗಿದ್ದ ಹೈಟೆನ್ಷನ್ ಲೈನ್ಗೆ ತಾಗಿ ಈ ದುರ್ಘಟನೆ ನಡೆದಿದೆ.
ಲವಕುಶ್ ಅಕಾ ಲೋಕೇಶ್ (22) ಮತ್ತು ಧ್ರುವ್ (17) ಸ್ಥಳದಲ್ಲೇ ಮೃತಪಟ್ಟರೆ, ರಾಮ್ವೀರ್ (50), ಥಾನ್ ಸಿಂಗ್ (30), ಹರಿ ಸಿಂಗ್, ಶಿಮ್ಲಾ (35) ತೀವ್ರ ಸುಟ್ಟಗಾಯಗಳಾಗಿದ್ದು, ಅವರನ್ನು ಬದಿ ಮತ್ತು ಬಸೇದಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.