ಬೆಂಗಳೂರು,ಜೂ 19 (DaijiworldNews/MS): ನೋಂದಣಿ ಇಲಾಖೆಯಲ್ಲಿ ಹಲವು ಬದಲಾವಣೆ ತರಲಾಗಿದ್ದು, ರಾಜ್ಯದ 251 ನೋಂದಣಿ ಕಚೇರಿಗಳಲ್ಲಿ ಇಂದು ಸಂಜೆಯೊಳಗೆ ಕಾವೇರಿ-2 ತಂತ್ರಾಂಶ ಜಾರಿಯಾಗಲಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿ, ರಿಜಿಸ್ಟ್ರೇಷನ್ ಸಂದರ್ಭದಲ್ಲಿ ಬಹಳಷ್ಟು ವಿಳಂಬ ಆಗುತ್ತಿದೆ. ಜನರು ಆಸ್ತಿ ಮಾರಾಟ ಮಾಡುವುದಕ್ಕೆ ಪಡಬಾರದ ಯಾತನೆ ಅನುಭವಿಸಿದ್ದಾರೆ. ಏಪ್ರಿಲ್ನಿಂದ ಕಾವೇರಿ-2 ನೋಂದಣಿ ಪ್ರಕ್ರಿಯೆ ಅಳವಡಿಸಲಾಗಿದೆ. 251 ನೋಂದಣಿ ಕಚೇರಿಗಳಲ್ಲಿ ಇಂದು ಸಂಜೆಯೊಳಗೆ ಕಾವೇರಿ-2 ತಂತ್ರಾಂಶ ಜಾರಿಯಾಗಲಿದೆ. ಎಲ್ಲಾ ದಾಖಲೆಗಳನ್ನು ಕಾವೇರಿ-2 ತಂತ್ರಾಂಶದಲ್ಲಿ ಸಲ್ಲಿಕೆ ಮಾಡಬಹುದು. ಸಬ್ ರಿಜಿಸ್ಟ್ರಾರ್ ಕೂಡ ಅನ್ ಲೈನ್ ನಲ್ಲಿ ಮಾಡಬಹುದು. ನೋಂದಣಿ ಶುಲ್ಕವನ್ನು ಆನ್ ಲೈನ್ ನಲ್ಲೇ ಸಲ್ಲಿಕೆ ಮಾಡಬಹುದು. ಇದರಿಂದ ಜಮೀನು ಅಕ್ರಮವನ್ನು ತಡೆಯಬಹುದು. ಯಾರದ್ದೋ ಜಮೀನು ಯಾರಿಗೋ ನೋಂದಣಿ ಮಾಡುವುದನ್ನು ತಡೆಯಬಹುದು ಎಂದು ತಿಳಿಸಿದ್ದಾರೆ.
ಕಾವೇರಿ-2 ನಲ್ಲಿಆಸ್ತಿ ನೊಂದಾಣಿ ವೇಳೆ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ.