ಚಿಂಚೋಳಿ, ಜೂ 18 (DaijworldNews/HR): ತಂದೆಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಂಚೋಳಿ ತಾಲೂಕಿನ ಕುಂಚಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಪೋಚಾವರಂ ಗ್ರಾಮದಲ್ಲಿ ನಡೆದಿದೆ.
ಕುಂಚಾವರಂ ಗ್ರಾಮದ ಹಣಮಂತ ಸಂಜಪ್ಪ (36), ಅಕ್ಷತಾ (6), ಓಂಕಾರ (9) ಮೃತಪಟ್ಟರು.
ಹಣಮಂತ ಹೈದರಾಬಾದ್ ಗೆ ಕೂಲಿ ಕೆಲಸಕ್ಕೆ ಹೋಗಿದ್ದು, ಶನಿವಾರ ತನ್ನ ಮಕ್ಕಳನ್ನು ಕರೆದುಕೊಂಡು ಬಂದು ತನ್ನ ಅಣ್ಣ ಗೋಪಾಲ ಇವರಿಗೆ ಪೋನ ಮಾಡಿ ‘ನಾನು ಮತ್ತು ನನ್ನ ಮಕ್ಕಳು ಬಾವಿಗೆ ಬಿದ್ದು ಸಾಯುತ್ತಿದ್ದೇವೆ’ ಎಂದು ಹೇಳಿದ್ದಾನೆ.
ಇನ್ನು ಗಾಬರಿಗೊಂಡ ಸಹೋದರ ಕುಂಚಾವರಂ ಪೊಲೀಸರಿಗೆ ಮತ್ತು ನೆರೆಯ ತೆಲಂಗಾಣ ಬಟ್ವಾರಂ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಎಲ್ಲಾ ಕಡೆ ಹುಡುಕಾಟ ಮಾಡಿದ್ದಾರೆ. ಆದರೆ ಎಲ್ಲಿಯೂ ಪತ್ತೆಯಾಗಲಿಲ್ಲ.
ಇಂದು ಪೊಚಾವರಂ ಗ್ರಾಮದ ಬಾವಿಯ ಬಳಿ ಚಪ್ಪಲಿ ಕಂಡು ಬಂದಿದ್ದು, ಕುಂಚಾವರಂ ಪೋಲಿಸರು ಪಾತಾಳಗರಡಿ ಹಾಕಿ ಹುಡುಕಿದಾಗ ಹಣಮಂತ ಶವ ಪತ್ತೆಯಾಗಿದೆ. ಜೊತೆಗೆ ಬೆನ್ನಿಗೆ ಇಬ್ಬರು ಮಕ್ಕಳ ಶವ ಕಾಣಿಸಿಕೊಂಡಿವೆ.
ಈ ಬಗ್ಗೆ ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.