ಬೆಂಗಳೂರು, ಜೂ 16 (DaijiworldNews/HR): ನೂತನ ಕಾಂಗ್ರೆಸ್ ಸರ್ಕಾರದ ಮೊದಲ ಬಜೆಟ್ ಮಂಡನೆ ಜುಲೈ 7 ರಂದು ನಡೆಯಲಿದ್ದು, ಈ ಕುರಿತಾದ ಪೂರ್ವಭಾವಿ ಸಭೆ ಇಂದು(ಜೂ.16) ಕೂಡ ಮುಂದುವರೆಯಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರೇಸ್ ಕೋರ್ಸ್ ರಸ್ತೆಯ ಶಕ್ತಿ ಭವನದಲ್ಲಿ ಬಜೆಟ್ ಪೂರ್ವಭಾವಿ ಸಭೆ ಮುಂದುವರೆಯಲಿದೆ.
ಇನ್ನು ಬೆಳಗ್ಗೆ 11 ರಿಂದ ಸಂಜೆಯತನಕ ಬಜೆಟ್ ಪೂರ್ವಭಾವಿ ಸಭೆಯನ್ನು ಮುಖ್ಯಮಂತ್ರಿಗಳು ನಡೆಸಲಿದ್ದು, 14 ಇಲಾಖೆಗಳ ಜೊತೆ ಸಭೆ ನಡೆಸಲಿದ್ದಾರೆ.
ಜುಲೈ 7ರಂದು ನಡೆಯಲಿರುವ ರಾಜ್ಯ ಬಜೆಟ್ ನಲ್ಲಿ ಯಾರಿಗೆ ಏಷ್ಟು ಸೌಲಭ್ಯ ಸಿಗಲಿದೆ ಎಂಬುದನ್ನು ಕಾದುನೋಡ ಬೇಕಿದೆ.