ನವದೆಹಲಿ,ಜೂ 15 (DaijiworldNews/MS): ಬೆಂಗಳೂರು-ಹುಬ್ಬಳ್ಳಿ ಸೇರಿದಂತೆ ದೇಶದ ಐದು ಮಾರ್ಗಗಳಲ್ಲಿ ಹೊಸ ವಂದೇ ಭಾರತ್ ರೈಲುಗಳಿಗೆ ಜೂ26ರಂದು ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.
ಬೆಂಗಳೂರು-ಹುಬ್ಬಳ್ಳಿ, ಮುಂಬೈ-ಗೋವಾ, ಪಟ್ನಾ-ರಾಂಚಿ, ಭೋಪಾಲ್-ಇಂದೋರ್ ಹಾಗೂ ಭೋಪಾಲ್-ಜಬ್ಬಲ್ಪುರ ಮಾರ್ಗದಲ್ಲಿ ವಂದೇ ಭಾರತ್ ಸಂಚಾರಕ್ಕೆ ಚಾಲನೆ ನೀಡಲಾಗುತ್ತಿದೆ.
ಒಡಿಸಾ ರೈಲು ದುರಂತದ ಬಳಿಕ ಮುಂಬೈ ಹಾಗೂ ಗೋವಾ ನಡುವಿನ ವಂದೇ ಭಾರತ್ ಉದ್ಘಾಟನೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸೆಮಿ ಹೈಸ್ಪೀಡ್ ರೈಲುಗಳಾದ ವಂದೇ ಭಾರತ್ ರೈಲು ಸೇವೆ ಉದ್ಘಾಟಿಸುವ ನಿರೀಕ್ಷೆಯಿದೆ.ಒಂದೇ ದಿನದಲ್ಲಿ ಐದು ವಂದೇ ಭಾರತ್ ರೈಲುಗಳು ಕಾರ್ಯಾಚರಣೆ ಆರಂಭಿಸುತ್ತಿರುವುದು ಇದೇ ಮೊದಲು.