ನವದೆಹಲಿ, ಜೂ 13 (DaijiworldNews/MS): ಚಂದ್ರಯಾನ-3ರ ಎಲ್ಲಾ ಪರೀಕ್ಷೆಗಳು ಉತ್ತಮವಾಗಿ ಯೋಜಿಸಿದಂತೆ ನಡೆದರೆ ಜುಲೈ 12 ಹಾಗೂ 19ರ ನಡುವೆ ಬಾಹ್ಯಾಕಾಶಕ್ಕೆ ಉಡಾವಣೆಯಾಗಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಹೇಳಿದ್ದಾರೆ.
ತಿರುವನಂತಪುರದಲ್ಲಿ ಮಾತನಾಡಿ, ಚಂದ್ರನ ಮೇಲ್ಮೈಯಲ್ಲಿ ಇಳಿಯುವ ಭಾರತದ ಮಹತ್ವಾಕಾಂಕ್ಷೆಯ ಯೋಜನೆಯಾದ ಚಂದ್ರಯಾನ-3 ಲಾಂಚ್ಗೆ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಲ್ಲಿ ಅಂತಿಮ ಸಿದ್ಧತೆಗಳು ನಡೆಯುತ್ತಿದೆ ಎಂದಿದ್ದಾರೆ.
ಈ ಉಡಾವಣೆಗೆ LVM-3 ರಾಕೆಟ್ ಬಳಸಲಾಗುತ್ತಿದ್ದು, ಅದರ ಜೋಡಣಾ ಕಾರ್ಯ ನಡೆಯುತ್ತಿದೆ, ಉಡಾವಣೆಗೆ ಎಲ್ವಿಎಂ-3 ರಾಕೆಟ್ ಬಳಸಲಾಗುತ್ತಿದೆ. ಅದರ ಜೋಡಣೆ ನಡೆಯುತ್ತಿದೆ. ಇದಕ್ಕಾಗಿ ಎಲ್ಲ ಭಾಗಗಳು ಶ್ರೀಹರಿಕೋಟಾ ತಲುಪಿವೆ ಎಂದರು.
ಚಂದ್ರನ ಮೇಲೆ ಸೇಫ್ ಲ್ಯಾಂಡಿಂಗ್ ಮತ್ತುರೋವರ್ ಸಂಚಾರ ಈ ಮಿಷನ್ ಪ್ರಮುಖ ಉದ್ದೇಶವಾಗಿದೆ.