ಮಧ್ಯಪ್ರದೇಶ, ಜೂ 12 (DaijiworldNews/MS): ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಜಬಲ್ಪುರದಲ್ಲಿ ಬೃಹತ್ ರ್ಯಾಲಿ ಸಂಘಟಿಸುವ ಮೂಲಕ ಮಧ್ಯಪ್ರದೇಶದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.
ಈ ವೇಳೆ ಭಾವುಕರಾಗಿ ಮಾತನಾಡಿ, ಈ ದೇಶ ಕಟ್ಟಲು ನನ್ನ ಕುಟುಂಬ ರಕ್ತ ನೀಡಿದೆ. ನಾನು ಜನರಿಂದ ಮತ ಕೇಳುತ್ತಿಲ್ಲ. ಹಾಗೆಯೇ ನಾನು ಯಾರನ್ನೂ ಟೀಕಿಸುವುದಿಲ್ಲ. ನಮಗೆ ಭಾರತೀಯರಿಗೆ, ನಮ್ಮ ಧರ್ಮವು ಅತ್ಯುನ್ನತವಾಗಿದೆ, ಆದರೆ ಇದರರ್ಥ ಸಾರ್ವಜನಿಕರನ್ನು ದಾರಿ ತಪ್ಪಿಸಬೇಕು ಎಂದಲ್ಲ. ಜನರ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಕೆರಳಿಸಲಾಗುತ್ತಿದೆ ಎಂದರು.
ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಪಕ್ಷದ ಇತ್ತೀಚಿನ ಚುನಾವಣಾ ವಿಜಯಗಳನ್ನು ಉಲ್ಲೇಖಿಸಿದ ವಾದ್ರಾ, ಎರಡು ರಾಜ್ಯಗಳು ಬಿಜೆಪಿಗೆ ಸೂಕ್ತವಾದ ಉತ್ತರವನ್ನು ನೀಡಿವೆ ಎಂದು ಹೇಳಿದರು.