ನವದೆಹಲಿ, ಮಾ 31(SM): ದೇಶದ ಸೇವಕರೆಲ್ಲರು ಚೌಕೀದಾರರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ‘ಮೈ ಬಿ ಚೌಕೀದಾರ್’ ಸಮಾವೇಶದಲ್ಲಿ ಮಾತನಾಡಿದ ಅವರು, ಚೌಕಿದಾರ ಎಂಬುವುದು ಒಂದು ರೀತಿಯ ಭಾವನೆ ಮಾತ್ರ. ಅದು ಒಂದು ರೀತಿಯ ಸ್ಪೂರ್ತಿಯಾಗಿದೆ ಎಂದರು.
ಚೌಕಿದಾರ ಎಂದರೆ ಸಿದ್ಧತೆಯಲ್ಲ. ಚೌಕಿದಾರಗೆ ಸಮವಸ್ತ್ರದ ಗುರುತು ಅಗತ್ಯವಿಲ್ಲ ಎಂದರು. ಗ್ರಾಮ-ನಗರದಲ್ಲಿರುವವರು, ಅನಕ್ಷರಸ್ಥ-ಅಕ್ಷರಸ್ಥರು, ವೈದ್ಯರು, ಕೂಲಿ ಕಾರ್ಮಿಕರು ಎಲ್ಲರೂ ಚೌಕಿದಾರರೇ ಎಂದು ಮೋದಿ ಹೇಳಿದರು. ಸಾರ್ವಜನಿಕರ ಹಣ ಕೊಳ್ಳೆ ಹೊಡೆಯುವವರನ್ನು ಚೌಕಿದಾರನಾಗಿ ನಾನು ಸುಮ್ಮನೆ ಬಿಡುವುದಿಲ್ಲ ಎಂದು ಇದೇ ವೇಳೆ ಭ್ರಷ್ಟರಿಗೆ ಎಚ್ಚರಿ ನೀಡಿದರು.
ದೇಶದ ಎಲ್ಲಾ ಚೌಕಿದಾರರು ಮೈನ್ ಬಿ ಚೌಕಿದಾರ ಆಂದೋಲನದಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು. ಗಾಂಧಿ ತತ್ತ್ವದಂತೆ ಟ್ರಸ್ಟಿ ರೂಪದಲ್ಲಿ ಕಾರ್ಯನಿರ್ವಹಿಸಬೇಕು. ಈ ಚುನಾವಣೆಯಲ್ಲಿ ಜನರು ಚೌಕಿದಾರರನ್ನು ಇಷ್ಟಪಡುತ್ತಾರೆ ಎಂದು ಪ್ರಧಾನಿ ಭರವಸೆ ವ್ಯಕ್ತಪಡಿಸಿದ್ದಾರೆ