ತಿರುವನಂತಪುರಂ, ಮಾ 31(SM): ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೇರಳದ ವಯನಾಡು ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ರಾಹುಲ್ ಸ್ಪರ್ಧೆ ಹಿನ್ನೆಲೆಯಲ್ಲಿ ಅವರನ್ನು ಸೋಲಿಸಬೇಕೆನ್ನುವ ಪ್ರಯತ್ನಕ್ಕೆ ಎಡಪಕ್ಷಗಳು ಮುಂದಾಗಿವೆ. ಮಾರ್ಚ್ 31ರಂದು ಅಭ್ಯರ್ಥಿ ಘೋಷಣೆಯಾದ ಬಳಿಕ ಕೇರಳದ ಎಡಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿದೆ.
ರಾಹುಲ್ ಗಾಂಧಿ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಹುಲ್ ಗಾಂಧಿ ವಯನಾಡು ಲೋಕಸಭೆಯಿಂದ ಎಡಪಕ್ಷದ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಅವರ ಸ್ಪರ್ಧೆ ಬಿಜೆಪಿಯ ವಿರುದ್ಧವಲ್ಲ. ಬದಲಿಗೆ ಎಡಪಕ್ಷದ ವಿರುದ್ಧ. 20 ಕ್ಷೇತ್ರಗಳ ಪೈಕಿ ವಯನಾಡು ಕೂಡ ಒಂದು ಕ್ಷೇತ್ರವಷ್ಟೇ. ನಾವು ಈ ಕ್ಷೇತ್ರದಲ್ಲಿ ಹೋರಾಟ ಮುಂದುವರೆಸುತ್ತೇವೆ ಎಂದು ಕೇರಳ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.
ರಾಹುಲ್ ಗಾಂಯವರು ಬಿಜೆಪಿ ಅಭ್ಯರ್ಥಿ ಇರುವ ಕ್ಷೇತ್ರದಿಂದ ಸ್ಪರ್ಧಿಸಬಹುದಾಗಿತ್ತು. ಆದರೆ ಎಡಪಕ್ಷದ ವಿರುದ್ಧ ಅವರು ಸ್ಪರ್ಧೆಗೆ ಮುಂದಾಗಿದ್ದಾರೆ. ಆದರೆ ಇಲ್ಲಿ ಎಡಪಕ್ಷಗಳ ವಿರುದ್ಧ ಹೋರಾಡುವಂತಹ ಅಗತ್ಯ ಏನು ಇಲ್ಲ ಎಂದು ಅವರು ತಿಳಿಸಿದ್ದಾರೆ. ಎಡಪಕ್ಷಗಳನ್ನು ನಿಜಕ್ಕೂ ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿದ್ದರೆ, ನಾವು ಪ್ರತಿಸ್ಪರ್ಧೆಗೆ ಸಿದ್ಧ ಎಂದು ತಿಳಿಸಿದರು.