ಭೋಪಾಲ್, ಜೂ 07 (DaijiworldNews/HR): ಮಧ್ಯ ಪ್ರದೇಶದ ಸೆಹೋರ್ ಜೆಲ್ಲೆಯ ಮುಗವಲಿ ಗ್ರಾಮದಲ್ಲಿ ಆಟ ಆಡುತ್ತಿದ್ದಾಗ ತೆರೆದ ಕೊಳವೆ ಬಾವಿಗೆ ಎರಡೂವರೆ ವರ್ಷದ ಹೆಣ್ಣು ಮಗುವೊಂದು ಬಿದ್ದಿದ್ದು, ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಸೃಷ್ಟಿ ಕುಶ್ವಾಹ ಎನ್ನುವ ಮಗು ಜಮೀನಿನಲ್ಲಿ ಆಟ ಆಡುತ್ತಿದ್ದಾಗ ತೆರೆದೆ ಕೊಳವೆ ಬಾವಿಗೆ ಬಿದ್ದಿದ್ದು, ಎಸ್ ಡಿಆರ್ ಎಫ್, ಎನ್ ಡಿಆರ್ ಎಫ್ ಸ್ಥಳೀಯ ಪೊಲೀಸರ ಸಹಕಾರದಿಂದ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಸಿದ್ದಾರೆ.
ಇನ್ನು 300 ಅಡಿ ಆಳದ ಕೊಳವೆ ಬಾವಿಗೆ ಮಗು ಬಿದ್ದಿದ್ದು, 20-25 ಅಡಿ ಆಳದಲ್ಲಿ ಮಗು ಸಿಲುಕಿದೆ. ಜೆಸಿಬಿ ಮೂಲಕ ಮತ್ತೊಂದು ಗುಂಡಿ ಅಗೆಯಲಾಗುತ್ತಿದ್ದು, ಆಮ್ಲಜನಕ ಸರಬರಾಜನ್ನು ನೀಡಿ ಮಗುವಿನ ಚಲನವಲಗಳ ಮೇಲೆ ನಿಗಾ ಇಡಲಾಗುತ್ತಿದೆ.