ದೇವದುರ್ಗ, ಜೂ 06 (DaijiworldNews/MS): ದೇವದುರ್ಗ ಜೆಡಿಎಸ್ ಶಾಸಕಿ ಕರಿಯಮ್ಮ ಜಿ ನಾಯಕ್ ಗೆ ನಿಂದನೆ ಮಾಡಿರುವ ಆರೋಪದಡಿ 8 ಮಂದಿ ಬಿಜೆಪಿ ಕಾರ್ಯಕರ್ತರ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.
ಕರೆಯಮ್ಮ ಜಿ. ನಾಯಕ್ ಜೂನ್ 4ರಂದು ಅರಕೇರಾ ತಾಲೂಕಿನ ಆಲದಮರದ ತಾಂಡದಲ್ಲಿ ಲೈನ್ ಮ್ಯಾನ್ ವಿರೂಪಾಕ್ಷಪ್ಪ ಎಂಬುವರು ವಿದ್ಯುತ್ ಅವಘಡದಲ್ಲಿ ಸಾವನ್ನಪ್ಪಿದ್ದರು. ವಿರೂಪಾಕ್ಷ ಅರಕೇರಾ ಜುಟಮರಡಿ ಕೆಇಬಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜೂ.4 ರಂದು ವಿದ್ಯುತ್ ಪೂರೈಕೆಯ ಸಮಸ್ಯೆಯನ್ನು ಪರಿಹರಿಸಲು ಕಂಬ ಹತ್ತಿದ್ದರು.ಈ ವೇಳೆ ವಿದ್ಯುತ್ ಶಾಕ್ ಹೊಡೆದಿದ್ದು, ವಿದ್ಯುತ್ ಕಂಬದ ಮೇಲೆಯೇ ಕೊನೆಯುಸಿರೆಳದಿದ್ದರು.
ಘಟನಾ ಸ್ಥಳಕ್ಕೆ ತಡವಾಗಿ ಶಾಸಕಿ ಕರೆಯಮ್ಮ ಆಗಮಿಸಿದ್ದರು. ಹೀಗಾಗಿ ಶಾಸಕಿ ಕರಿಯಮ್ಮ ನಾಯಕ್ ವಿರುದ್ಧ ಬಿಜೆಪಿ ಕಾರ್ಯಕರ್ತರು ನಿಂದಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.