ಒಡಿಶಾ, ಜೂ 05 (DaijiowrldNews/HR): ಒಡಿಶಾದ ಬಾಲಸೋರ್ನಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ 275 ಜನರನ್ನು ಬಲಿ ಪಡೆದುಕೊಂಡು ಮೂರು ದಿನಗಳ ನಂತರ, ಸುಣ್ಣದ ಕಲ್ಲುಗಳನ್ನು ಸಾಗಿಸುತ್ತಿದ್ದ ಮತ್ತೊಂದು ರೈಲು ಬರ್ಗಢ್ ಪ್ರದೇಶದಲ್ಲಿ ಹಳಿ ತಪ್ಪಿದೆ.
ಡುಂಗ್ರಿ ಸುಣ್ಣದ ಗಣಿಗಳು ಮತ್ತು ಎಸಿಸಿ ಬರ್ಗಢ್ ನ ಸಿಮೆಂಟ್ ಸ್ಥಾವರದ ನಡುವೆ ಖಾಸಗಿ ನ್ಯಾರೋ ಗೇಜ್ ರೈಲು ಮಾರ್ಗವಿದ್ದು, ಲೈನ್, ವ್ಯಾಗನ್ಗಳು ಮತ್ತು ಲೊಕೊಮೊಟಿವ್ ಎಲ್ಲವೂ ಖಾಸಗಿಯಾಗಿದ್ದು, ಭಾರತೀಯ ರೈಲ್ವೆ ವ್ಯವಸ್ಥೆಯೊಂದಿಗೆ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿಲ್ಲ ಎಂದು ಮೂಲಗಳು ತಿಳಿಸಿವೆ.