ಗುಜರಾತ್, ಜೂ 04 (DaijiworldNews/MS): ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಮಗು ಮೃತಪಟ್ಟಿರುವ ಘಟನೆ ಗುಜರಾತ್ನ ಜಾಮ್ನಗರದಲ್ಲಿ ನಡೆದಿದೆ.
ತಮಾಚನ್ ಗ್ರಾಮದ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮದ್ಯಪ್ರದೇಶದ್ ಮೂಲದ ಬುಡಕಟ್ಟು ಕುಟುಂಬಕ್ಕೆ ಸೇರಿದ 2 ವರ್ಷದ ಹೆಣ್ಣು ರೋಶನಿಯನ್ನು ಸುಮಾರು 21 ಗಂಟೆಗಳ ಕಾರ್ಯಾಚರಣೆ ಬಳಿಕ ಹೊರತೆಗೆಯಲಾಯಿತದರೂ , ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಬಾಲಕಿ ಮೃತಪಟ್ಟಿರುವುದನ್ನು ಧೃಡಪಡಿಸಿದ್ದಾರೆ.
ಶನಿವಾರ ಬೆಳಗ್ಗೆ 9:30 ಗಂಟೆಯ ಸುಮಾರಿಗೆ ಆಟವಾಡುತ್ತಿದ್ದಾಗ ಕೃಷಿ ಜಮೀನಲ್ಲಿದ್ದ 200 ಅಡಿ ಆಳದ ತೆರೆದ ಕೊಳವೆ ಬಾವಿಗೆ ರೋಶನಿ ಬಿದ್ದಿದ್ದಳು.
20 ಆಳದಲ್ಲಿ ಸಿಲುಕಿದ್ದ ಮಗುವನ್ನು ಸತತ ಕಾರ್ಯಾಚರಣೆಯ ಬಳಿಕ ಭಾನುವಾರ ಮುಂಜಾನೆ 5:45ರ ಸಮಯಕ್ಕೆ ಹೊರ ತೆಗೆಯಲಾಗಿತ್ತು.