ಬೆಂಗಳೂರು, ಜೂ 02 (DaijiworldNews/MS): ಕಾಂಗ್ರೆಸ್ ನ ಮೊದಲ ಗ್ಯಾರಂಟಿ ಆಗಿರುವ ಗೃಹಜ್ಯೋತಿ ಯೋಜನೆ ಜು. ರಿಂದ ಜಾರಿಗೆ ಬರಲಿದೆ ಎಂದು ಸಿಎಂ ಸಿದ್ದರಾಮಯ್ಯ ಇಂದು ಘೋಷಿಸಿದ್ದಾರೆ.
ಹಿಂದಿನ 12 ತಿಂಗಳ ವಿದ್ಯುತ್ ಬಳಕೆಯ ಸರಾಸರಿಗೆ ಅದರ ಶೇ. 10 ರಷ್ಟು ಸೇರಿಸಿ ಗರಿಷ್ಟ 200 ಯೂನಿಟ್ ವರೆಗೆ ಎಲ್ಲಾ ಮನೆಗಳಿಗೂ ಉಚಿತ ವಿದ್ಯುತ್ ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ.
ಇದು ಜುಲೈ ತಿಂಗಳಿಂದ ಅನ್ವಯವಾಗಲಿದ್ದು , ಜೂನ್ ವರೆಗೆ ಉಳಿಸಿಕೊಂಡಿರುವ ಬಿಲ್ ಅನ್ನು ಕಡ್ಡಾಯವಾಗಿ ಕಟ್ಟಲೇ ಬೇಕು. ಇಲ್ಲಿವಯವರೆಗೆ ಬಾಕಿ ಇರುವ ಬಿಲ್ ಅನ್ನು ಸರ್ಕಾರ ಕಟ್ಟುವುದಿಲ್ಲ, ಅದನ್ನು ಬಳಕೆದಾರರೇ ಕಟ್ಟಬೇಕು ಎಂದು ಸ್ಪಷ್ಟಪಡಿಸಿದ್ದಾರೆ.