ತೆಲಂಗಾಣ, ಮೇ 31 (DaijiworldNews/HR): ಒಂದು ವೇಳೆ ನಿಮಗೆ ಧೈರ್ಯವಿದ್ದರೆ ಚೀನಾದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರು ಬಿಜೆಪಿಗೆ ಸವಾಲು ಹಾಕಿದ್ದಾರೆ.
ತೆಲಂಗಾಣ ಓಲ್ಡ್ ಸಿಟಿ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸುವುದಾಗಿ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿರುವ ಒವೈಸಿ, ಒಂದು ವೇಳೆ ನಿಮಗೆ ಧೈರ್ಯವಿದ್ದರೆ ಚೀನಾದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಎಂದಿದ್ದಾರೆ
ಇನ್ನು ಬಂಡಿ ಸಂಜಯ್ ಸಿಂಗ್ ಓಲ್ಡ್ ಸಿಟಿ ಮೇಲೆ ಸರ್ಜಿಕಲ್ ದಾಳಿ ನಡೆಸುವುದಾಗಿ ಹೇಳಿದ್ದಾರೆ. ಆದರೆ ನಿಮಗೆ ಧೈರ್ಯವಿದ್ದರೆ ಚೀನಾದ ಮೇಲೆ ಸರ್ಜಿಕಲ್ ದಾಳಿ ನಡೆಸಿ ಎಂದು ವಾಗ್ದಾಳಿ ನಡೆಸಿದ್ದಾರೆ.