ಮುಂಬೈ, ಮೇ 30(DaijiworldNews/KH): ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಗಳು ಜನರನ್ನು ವಂಚಿಸಲು ವೆಬ್ಸೈಟ್ಗಳಲ್ಲಿ ಜನರಿಗೆ ಸಹಾಯ ಮಾಡುವ ಮೂಲಕ ಟೋಲ್ ಫ್ರೀ ಸಂಖ್ಯೆಗಳನ್ನು ಬಳಸಿ ಅವರಿಂದ ಹಣ ಪಡೆದುಕೊಳ್ಳುವುದು ಮುಂತಾದ ಹೆಚ್ಚಿನ ವಂಚನೆಗಳು ನಡೆಯುತ್ತನೆ ಇರುತ್ತೆ. ಇದೇ ರೀತಿ ಓರ್ವ ಮಹಿಳೆ ಗಾಯಗೊಂಡ ಹಕ್ಕಿಗೆ ಸಹಾಯ ಮಾಡಲು ಬಯಸಿ ಸೈಬರ್ ವಂಚನೆ ಟೋಲ್ ಫ್ರೀ ಸಂಖ್ಯೆ ಮೂಲಕ ಪಕ್ಷಿ ರಕ್ಷಣಾ ಪ್ರತಿಷ್ಠಾನವನ್ನು ಸಂಪರ್ಕಿಸಿದ ನಂತರ 1 ಲಕ್ಷ. ರೂ. ಕಳೆದುಕೊಂಡಿದ್ದಾರೆ.
ಮಲಾಡ್ ನಿವಾಸಿ ಧ್ವನಿ ಮೆಹ್ತಾ ಅವರು ಕಳೆದ ನಾಲ್ಕು ವರ್ಷಗಳಿಂದ ಫೇಮಸ್ ಸ್ಟುಡಿಯೋವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಹೀಗೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಧ್ವನಿ ಮೆಹ್ತಾ ರಸ್ತೆಯಲ್ಲಿ ಗಾಯಗೊಂಡು ಅರೆ ಜೀವ ಸ್ಥಿತಿಯಲ್ಲಿದ್ದ ಹಕ್ಕಿಯೊಂದನ್ನು ಕಂಡ ಕೂಡಲೇ ಅದನ್ನು ರಕ್ಷಿಸಿ ಕೈಯಲ್ಲಿಡಿದು ಅದರ ಸಹಾಯಕ್ಕೆ ಹೋಗಿದ್ದಾರೆ. ಧ್ವನಿ ಮೆಹ್ತಾ ಅವರಿಗೆ ಹಕ್ಕಿಗೆ ಚಿಕಿತ್ಸೆ ನೀಡುವ ಯಾವುದೇ ವೈದ್ಯರು ಗೊತ್ತಿಲ್ಲದ ಕಾರಣ ಗೂಗಲ್ ನಲ್ಲಿ ಈ ಕುರಿತು ಹುಡುಕಿದ್ದಾರೆ.
ಗೂಗಲ್ನಲ್ಲಿ ಸಿಕ್ಕ ಟೋಲ್-ಫ್ರೀ ಸಂಖ್ಯೆಯ ಮೂಲಕ ಎನ್ಜಿಒ ಅನ್ನು ಸಂಪರ್ಕಿಸಿದಳು. ಸೈಬರ್ ವಂಚಕರು ಆಕೆಗೆ ಅಪ್ಲೀಕೇಶನ್ ವೊಂದನ್ನು ಭರ್ತಿ ಮಾಡಿ ಎಂದು ಧ್ವನಿ ಮೆಹ್ತಾ ಅವರಿಗೆ ಹೇಳಿದ್ದಾರೆ ಅವರು ಹೇಳಿದಂತೆ ಇವರು ಕೆಲಸವನ್ನು ಮಾಡಿ ಮಾಹಿತಿಯನ್ನು ಹಾಕಿದ್ದಾರೆ.
ಅಪ್ಲೀಕೇಶನ್ ಫಿಲ್ ಮಾಡಲು ನಿಗದಿತ ಶುಲ್ಕವಿದ್ದರೂ ಧ್ವನಿ ಮೆಹ್ತಾ ಅವರು ಇದನ್ನು ಪೂರ್ತಿಗೊಳಿಸಿದ್ದಾರೆ. ಈ ಪ್ರಕ್ರಿಯೆ ನಡೆದ ಬಳಿಕವೂ ಅತ್ತ ಕಡೆಯಿಂದ ಯಾವ ಸಹಾಯವೂ ಬಂದಿಲ್ಲ. ಇದಾದ 4 ದಿನಗಳ ಬಳಿಕ ರೈಲಿನಲ್ಲಿ ಸಂಚರಿಸುತ್ತಿದ್ದ ಧ್ವನಿ ಮೆಹ್ತಾ ಅವರ ಮೊಬೈಲ್ ಗೆ 99,988 ರೂ. ಕಡಿತವಾಗಿರುವ ಸಂದೇಶ ಬಂದಿದ್ದು ಈ ವೇಳೆಯೇ ಅವರಿಗೆ ತಾನು ವಂಚಕರ ಬಲೆಗೆ ಬಿದ್ದಿದ್ದೇನೆ ಎನ್ನುವುದರ ಅರಿವು ಬಂದಿದೆ.
ಧ್ವನಿ ಮೆಹ್ತಾ ಈ ಕುರಿತ ಘಟನೆಯ ಬಗ್ಗೆ ಸೈಬರ್ ಕ್ರೈಂ ಇಲಾಖೆಗೆ ಆನ್ಲೈನ್ನಲ್ಲಿ ವರದಿ ಮಾಡಿದ್ದಾಳೆ ಮತ್ತು ಲಿಖಿತ ದೂರು ಸಲ್ಲಿಸಿದ್ದಾಳೆ. ಸದ್ಯ ಪೊಲೀಸರು ಈ ಸಂಬಂಧ ದೂರು ದಾಖಲಿಸಿಕೊಂಡು ವಂಚಕರ ಪತ್ತೆಗೆ ಬಲೆ ಬೀಸಿದ್ದಾರೆ.