ಜಮ್ಮು, ಮೇ 28 (DaijiworldNews/KH): ಜಮ್ಮು ಮತ್ತು ಕಾಶ್ಮೀರದಲ್ಲಿ 4.9ತೀವ್ರತೆಯ ಪ್ರಬಲತೆ ಹೆಚ್ಚಾಗಿ ಭೂಕಂಪ ಸಂಭವಿಸಿದ್ದು, ಬೆಳಗ್ಗೆ 10.19ಕ್ಕೆ 5.9 ತೀವ್ರತೆಯ ಭೂಕಂಪ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ್ದು , ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪದಿಂದ ನಡುಗಿದ ಅನುಭವ ಉಂಟಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 4.9ತೀವ್ರತೆಯ ಪ್ರಬಲತೆ ಹೆಚ್ಚಾಗಿ ಭೂಕಂಪ ಸಂಭವಿಸಿದ್ದು, ಹಾಗೆಯೇ ದೆಹಲಿ, ಎನ್ಸಿಆರ್ ಹಾಗೂ ಪಂಜಾಬ್ ಹರ್ಯಾಣ ಭಾಗಗಳಲ್ಲೂ ಭೂಮಿ ಕಂಪಿಸಿದೆ. ಭೂಕಂಪದ ಕೇಂದ್ರ ಬಿಂದು ಅಫ್ಘಾನಿಸ್ತಾನದ ತಜಿಖಿಸ್ತಾನದ ಗಡಿಯ ಹತ್ತಿರದಲ್ಲಿದೆ.
ಇನ್ನೂ ಟರ್ಕಿಯಲ್ಲೇ ಹೆಚ್ಚು ಭೂಕಂಪ ಕಂಪಿಸಿದ್ದು, ಈ ಭೂಕಂಪದಿಂದ ಅದೇಷ್ಟೋ ಜೀವಗಳನ್ನು ಬಲಿತೆಗೆದುಕೊಂಡಿದೆ. 1939ರಲ್ಲಿ ಟರ್ಕಿಯಲ್ಲೇ ಎರ್ಜಿಂಕನ್ನಲ್ಲಿ ಪ್ರಬಲ ಭೂಕಂಪ ಉಂಟಾಗಿತ್ತು. ಆ ವೇಳೆ 33,000 ಮಂದಿ ಬಲಿಯಾಗಿದ್ದರು. ಅದಾದ ದಶಕಗಳ ಬಳಿಕ ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪ ಇದಾಗಿದೆ. ಫೆ.6 ರಂದು ದಕ್ಷಿಣ ಟರ್ಕಿ ಪ್ರಾಂತ್ಯದ ಒಸ್ಮಾನಿಯೆದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿತು ಮತ್ತೆ 2ನೇ ಭೂಕಂಪವು ಮಧ್ಯಾಹ್ನದ ವೇಳೆಗೆ ಸಂಭವಿಸಿತು.
ಮುಂಚೆ ಭೂಕಂಪದ ತೀವ್ರತೆ 7.5 ರಷ್ಟು ದಾಖಲಾಗಿತು ಆದೇ ವೇಳೆಗೆ ಸಂಜೆ 6.0 ತೀವ್ರತೆಯ ಮತ್ತೊಂದು ಭೂಕಂಪ ಉಂಟಾಯಿತು. ಇದೇ ವೇಳೆ ಸಿರಿಯಾದಲ್ಲೂ ಭೂಕಂಪ ಸಂಭವಿಸಿತು. ಕೇವಲ 11 ಗಂಟೆಗಳ ಅವಧಿಯಲ್ಲಿ ಒಂದರ ಹಿಂದೆ ಒಂದರಂತೆ ಭೂಕಂಪದಿಂದ ಅಪಾರ ಪ್ರಮಾಣದ ಜೀವ ಕಳೆದುಕೊಂಡರು, ಆಸ್ತಿಪಾಸ್ತಿಗಳಿಗೆ ನಷ್ಟವಾಯಿತ್ತು.