ಮುಂಬೈ, ಮಾ30(SS): ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈ ಜೋಡಿ ಡಿವೋರ್ಸ್ಗೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಪ್ರಿಯಾಂಕಾ ಚೋಪ್ರಾ ಸಾಂಸಾರಿಕ ಜೀವನ ಹಳಸಿದ್ದು ಶೀಘ್ರದಲ್ಲೇ ಇವರಿಬ್ಬರೂ ದೂರವಾಗಲಿದ್ದಾರೆ. ಕೆಲವೊಂದು ಭಿನ್ನಾಭಿಪ್ರಾಯಗಳ ಕಾರಣ ಇವರ ಸಾಂಸಾರಿಕ ಜೀವನ ಕೊನೆಯ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿದೆ.
ಗಂಡ ಹೆಂಡತಿ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ಜಗಳ, ಮನಸ್ತಾಪ ನಡೆಯುತ್ತಿದೆ ಎಂದಿರುವ ಮೂಲಗಳು, ಕೆಲಸದ ವಿಚಾರವಾಗಿ ಜಗಳವಾಡುತ್ತಿದೆ. ಹೀಗಾಗಿ ಇಬ್ಬರೂ ಜತೆಯಾಗಿ ಕಳೆಯಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿವೆ.
ಮಾತ್ರವಲ್ಲ, ನಿಕ್ ಜೋನಾಸ್ ಕುಟುಂಬದಲ್ಲೂ ಪ್ರಿಯಾಂಕಾ ಜತೆಗಿನ ಬಾಂಧವ್ಯ ಹದಗೆಟ್ಟಿದೆಯಂತೆ. ಹೀಗಾಗಿ ಈ ಸಂಬಂಧವನ್ನು ಇಲ್ಲಿಗೆ ಮುರಿದುಕೊಳ್ಳಲು ನಿಕ್ಗೆ ಸೂಚಿಸಲಾಗಿದೆ ಎಂದು ಮೂಲಗಳು ಹೇಳಿದೆ.
ಪ್ರಿಯಾಂಕಾಗೆ 36 ವರ್ಷ ವಯಸ್ಸಾಗಿದ್ದರೂ ಇನ್ನೂ 21ರ ಯುವತಿ ತರಹ ಆಡುತ್ತಿರುವ ಕಾರಣ ನಿಕ್ ಕುಟುಂಬಿಕರು ವಿಚ್ಛೇದನದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ವಿಚ್ಛೇದನ ಸುದ್ದಿಯನ್ನು ಪ್ರಿಯಾಂಕಾ ಆಪ್ತರು ತಳ್ಳಿ ಹಾಕಿದ್ದು, ಇಬ್ಬರ ನಡುವೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಅವರು ಚೆನ್ನಾಗಿದ್ದಾರೆ. ಈ ರೀತಿ ಸುದ್ದಿ ಹರಿದಾಡುತ್ತಿರುವುದು ಇದೇ ಮೊದಲಲ್ಲ ಎಂದಿದ್ದಾರೆ.