ಕೊಪ್ಪಳ, ಮೇ 24(DaijiworldNews/MS): ಕರೆಂಟ್ ಬಿಲ್ ಕೇಳಲು ಬಂದಿದ್ದ ಲೈನ್ಮೆನ್ ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಕೊಪ್ಪಳದ ಕುಕನಪಲ್ಲಿ ಗ್ರಾಮದಲ್ಲಿ ಕಳೆದ ಆರು ತಿಂಗಳಿಂದ ವಿದ್ಯುತ್ ಬಿಲ್ ಬಾಕಿ ಇರಿಸಿದ್ದ ಬಿಲ್ ಕೇಳಲು ಬಂದ ಲೈನ್ ಮೆನ್ ಮಂಜುನಾಥ್ ಅವರ ಮೇಲೆ ಚಂದ್ರಶೇಖರಯ್ಯಹಲ್ಲೆ ಮಾಡಿದ್ದನು. ಇದೀಗ ಆರೋಪಿಯನ್ನು ಮುನಿರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಚಂದ್ರಶೇಖರಯ್ಯ ಕಳೆದ ಆರು ತಿಂಗಳಿಂದ ಅಂದಾಜು 9990 ಬಿಲ್ ಬಾಕಿ ಉಳಿಸಿಕೊಂಡಿದ್ದು ಜೆಸ್ಕಾಂ ಸಿಬ್ಬಂದಿ ಲೈನ್ ಕಟ್ ಮಾಡಿತ್ತು.. ಆದರೂ ಮತ್ತೆ ಅನಧಿಕೃತವಾಗಿ ಚಂದ್ರಶೇಖರಯ್ಯ ವಿದ್ಯುತ್ ಸಂರ್ಪಕ ಪಡೆದಿದ್ದನು. ಈ ಹಿನ್ನೆಲೆಯಲ್ಲಿ ಅಕ್ರಮ ವಿದ್ಯುತ್ ಸಂರ್ಪಕ ಪಡೆದಿದ್ದನ್ನೇ ಪ್ರಶ್ನಿಸಿ ಬಿಲ್ ವಸೂಲಿಗೆ ಬಂದಾಗ ಚಪ್ಪಲಿಯಿಂದ ಹಲ್ಲೆ ಮಾಡಿದ್ದ
ಚಂದ್ರಶೇಖರಯ್ಯ ಅವರನ್ನ ಅರೆಸ್ಟ್ ಮಾಡಿದ್ದೆವೆ. ಮುಂದೆ ಕಾನೂನು ಕ್ರಮ ಕೈಗೊಳ್ತೆವೆ ಎಂದು ಎಸ್ಪಿ ಯಶೋಧಾ ವಂಟಗೋಡಿ ಹೇಳಿದ್ದಾರೆ.