ತಿರುವನಂತಪುರಂ,ಮೇ21(DaijiworldNews/KH):ರಸ್ತೆ ಅಪಘಾತದಲ್ಲಿ ಎಸ್ಎಸ್ಎಲ್ಸಿ ಟಾಪರ್ ಆದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ವಡಕ್ಕೊಟ್ಟುಕಾವ್ನ ಕುಣಂತುಕೋಣಂ ಸೇತುವೆ ಬಳಿ ನಡೆದಿದೆ.ಪೋಷಕರು ಆತನ ಅಂಗಾಂಗ ದಾನಮಾಡಿ ಸಾರ್ಥಕತೆಯನ್ನು ಮೆರದಿದ್ದಾರೆ.
ಬಿಆರ್ ಸಾರಂಗ್ (16) ವರ್ಷದ ಬಾಲಕ ಮೃತಪಟ್ಟಿದ್ದು, ಈತ ಅಟ್ಟಿಂಗಲ್ನ ಸರ್ಕಾರಿ ಬಾಲಕರ ಎಚ್ಎಸ್ಎಸ್ ಶಾಲೆಯ ವಿದ್ಯಾರ್ಥಿಯಾಗಿದ್ದ,ತನ್ನ ತಾಯಿಯೊಂದಿಗೆ ಮೇ.6 ರಂದು ಆಟೋರಿಕ್ಷಾದಲ್ಲಿ ತೆರಳುತ್ತಿದ್ದಾಗ ರಸ್ತೆ ಅಪಘಾತ ನಡೆದಿದ್ದು ,ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಬಿಆರ್ ಸಾರಂಗ್ ಬುಧವಾರ ಮೇ.17 ರಂದು ಮೃತಪಟ್ಟಿದ್ದಾನೆ.
ಇನ್ನೂ ಶುಕ್ರವಾರ ಮೇ19ರಂದು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ಅದರಲ್ಲಿ ಸಾರಂಗ್ A+ ಅಂಕಗಳನ್ನು ಪಡೆದು ಟಾಪರ್ ಆಗಿದ್ದಾರೆ.
ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಟಾಪ್ ಗ್ರೇಡ್ ನಲ್ಲಿ ಪಾಸ್ ಆದ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ಸಾಮಾನ್ಯ ಶಿಕ್ಷಣ ಸಚಿವ ವಿ ಶಿವನ್ಕುಟ್ಟಿ ಹೇಳುತ್ತಾ ಭಾವುಕರಾಗಿದ್ದರು.
ಮಗನ ಅಂಗಾಂಗವನ್ನು ದಾನ ಮಾಡಿದ್ದ ಸಾರಂಗ್ ತಂದೆ ತಾಯಿ 6 ಮಂದಿಯ ಜೀವ ಉಳಿಸಿದ್ದಾರೆ.