ಮಂಡ್ಯ, ಮಾ 29(SM): ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಮಂಡ್ಯ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್ ದೋಸ್ತಿಗಳ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣದಲ್ಲಿದ್ದು, ಅವರಿಗೆ ಎದುರಾಳಿಯಾಗಿ ಸುಮಲತಾ ಸ್ಪರ್ಧಿಸುತ್ತಿದ್ದಾರೆ. ಇದೀಗ ಅವರು ಬಯಸಿದ ಚಿಹ್ನೆ ಆಯೋಗ ಅವರಿಗೆ ನೀಡಿದೆ.
ನಾಮಪತ್ರ ಸಲ್ಲಿಸುವ ಸಮಯದಲ್ಲಿತನಗೆ ಮೂರು ಚಿಹ್ನೆಗಳ ಪೈಕಿ ಒಂದು ಚಿಹ್ನೆಯನ್ನು ನೀಡುವಂತೆ ಸುಮಲತಾ ಕೇಳಿಕೊಂಡಿದ್ದರು. ಕಬ್ಬಿನ ಜೊಲ್ಲೆ ಮುಂದಿರುವ ರೈತ, ನಾಲ್ಕು ತೆಂಗಿನ ಮರದ ಚಿಹ್ನೆ ಹಾಗೂ ಕಹಳೆ ಊದುತ್ತಿರುವ ವ್ಯಕ್ತಿಯ ಚಿಹ್ನೆಯನ್ನು ಸುಮಲತಾ ಕೇಳಿದ್ದರು. ಅದರಂತೆಯೇ ಎರಡನೇ ಬಾರಿಯ ಪರಿಶೀಲನೆ ವೇಳೆ ವ್ಯಕ್ತಿ ಕಹಳೆ ಊದುತ್ತಿರುವ ಚಿಹ್ನೆಯನ್ನು ನೀಡಲಾಗಿದೆ.
ಇನ್ನು ತನಗೆ ಬಯಸಿದ ಚಿಹ್ನೆ ಸಿಕ್ಕ ಬಳಿಕ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅಬ್ಬರದ ಪ್ರಚಾರವನ್ನು ಆರಂಭಿಸಿದ್ದಾರೆ. ಏಪ್ರಿಲ್ 2 ರಿಂದ ದರ್ಶನ್ ಹಾಗೂ ಯಶ್ ಪ್ರಚಾರಕ್ಕೆ ಇಳಿಯಲಿದ್ದಾರೆ. ಏಪ್ರಿಲ್ 16ರವರೆಗೂ ಜಿಲ್ಲೆಯಲ್ಲಿ ಸಂಚಾರ ಮಾಡಲಿದ್ದಾರೆ. ಈ ನಡುವೆ ಮಾತನಾಡಿರುವ ಸುಮಲತಾ ಅವರು ಜೆಡಿಎಸ್ ವರ್ತನೆಯನ್ನು ಟೀಕಿಸಿದ್ದಾರೆ. ಜೆಡಿಎಸ್ ನಾಯಕರು ಮಹಿಳೆಯ ಸ್ಪರ್ಧೆಯನ್ನು ಅಪರಾಧದಂತೆ ಬಿಂಬಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.