ಬೆಂಗಳೂರು, ಮೇ 19 (DaijiworldNews/MS): ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. 136 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ದಿಗ್ವಿಜಯ ಸಾಧಿಸಿರುವ ಕಾಂಗ್ರೆಸ್, ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಹಾಗೂ ಡಿ.ಕೆ ಶಿವಕುಮಾರ್ ಡಿಸಿಎಂ ಆಗಿ ಆಯ್ಕೆ ಆಗಿದ್ದಾರೆ. ಇಬ್ಬರಿಬ್ಬರೂ 20ರಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆಯುವ ಸಮಾರಂಭದಲ್ಲಿ ಪದಗ್ರಹಣ ಸ್ವೀಕರಿಸಲಿದ್ದಾರೆ. ಇವರೊಂದಿಗೆ ಸುಮಾರು 28 ಮಂದಿ ಶಾಸಕರು ಸಚಿವರಾಗಿ ಪದಗ್ರಹಣ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಕಾಂಗ್ರೆಸ್ ಮೂಲಗಳ ಪ್ರಕಾರ ಸಂಭಾವ್ಯರ ಪಟ್ಟಿ ಇಂತಿದೆ.
- ಆರ್ವಿ ದೇಶಪಾಂಡೆ,
- ಎಚ್ಕೆ ಪಾಟೀಲ್,
- ಎಂಬಿ ಪಾಟೀಲ್,
- ಜಿ. ಪರಮೇಶ್ವರ್,
- ಸತೀಶ್ ಜಾರಕಿಹೊಳಿ,
- ಶಾಮನೂರು ಶಿವಶಂಕರಪ್ಪ
- ಕೃಷ್ಣ ಬೈರೇಗೌಡ,
- ರಾಮಲಿಂಗಾ ರೆಡ್ಡಿ
- ಬಿ.ಕೆ ಹರಿಪ್ರಸಾದ್
- ದಿನೇಶ್ ಗುಂಡೂರಾವ್,
- ಜಮೀರ್ ಅಹ್ಮದ್ ಖಾನ್,
- ಕೆಜೆ ಜಾರ್ಜ್
- ಲಕ್ಷ್ಮಣ್ ಸವದಿ
- ಡಾ ಅಜಯ್ ಸಿಂಗ್
- ಪ್ರಿಯಾಂಕ್ ಖರ್ಗೆ
- ಈಶ್ವರ ಖಂಡ್ರೆ
- ಚಲುವರಾಯಸ್ವಾಮಿ
- ತನ್ವೀರ್ ಸೇಠ್
- ಯುಟಿ ಖಾದರ್
- ಜಮೀರ್ ಅಹ್ಮದ್ ಖಾನ್
- ಮಧು ಬಂಗಾರಪ್ಪ