ನವದೆಹಲಿ, ಮೇ 18 (DaijiworldNews/HR): ನರೇಂದ್ರ ಮೋದಿ ಅವರ ಕೇಂದ್ರ ಸಂಪುಟಕ್ಕೆ ನೂತನ ಕಾನೂನು ಸಚಿವರಾಗಿ ಅರ್ಜುನ್ ರಾಮ್ ಮೆಘ್ವಾಲ್ ಅವರನ್ನು ನೇಮಿಸಲಾಗಿದೆ.
ಕಾನೂನು ಸಚಿವರಾಗಿದ್ದ ಕಿರಣ್ ರಿಜುಜು ಅವರಿಗೆ ಭೂವಿಜ್ಞಾನ ಖಾತೆ ನೀಡಲಾಗಿದ್ದು, ಕಾನೂನು ಮತ್ತು ನ್ಯಾಯ ಸಚಿವಾಲಯದಲ್ಲಿ ರಾಜ್ಯ ಸಚಿವರಾಗಿ ಸ್ವತಂತ್ರ ಉಸ್ತುವಾರಿ ಹೊಂದಿದ್ದ ಅರ್ಜುನ್ ರಾಮ್ ಮೆಘ್ವಾಲ್ ಅವರಿಗೆ ಇದೀಗ ಹೆಚ್ಚುವರಿ ಹೊಣೆ ನೀಡಲಾಗಿದೆ.
ಇನ್ನು ಕಿರಣ್ ರಿಜುಜು ಅವರನ್ನು ಕಾನೂನು ಖಾತೆಯಿಂದ ತೆಗೆದುಹಾಕಿರುವುದಕ್ಕೆ ಪ್ರತಿಕ್ರಿಯಿಸಿರುವ ಶಿವಸೇನೆ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ, ಮಹಾರಾಷ್ಟ್ರದ ತೀರ್ಪಿನ ಮುಜುಗರದ ಕಾರಣವೇ? ಅಥವಾ ಮೊದಾನಿ-ಸೆಬಿ ತನಿಖೆಯೇ?” ಎಂದು ಟ್ವೀಟ್ ಮಾಡಿದ್ದಾರೆ.