ನವದೆಹಲಿ, ಮೇ 18 (DaijiworldNews/MS): ಸಿದ್ದರಾಮಯ್ಯನವರು ಮುಂದಿನ ಮುಖ್ಯಮಂತ್ರಿಯಾಗುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದಿದ್ದಾರೆ.
ಆದರೆ, ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಸಿಎಲ್ ಪಿ ಸಭೆಯಲ್ಲಿ ನಡೆಯಬೇಕಿದೆ. ಹೀಗಿರುವಾಗ, ಯಾವ ಕಾರಣಕ್ಕೆ ಈ ಸುದ್ದಿಗೋಷ್ಠಿ ಕರೆದಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಮೂಲದ ಪ್ರಕಾರ, ಸಿಎಂ ಆಯ್ಕೆ ವಿಚಾರ ಯಾವುದೇ ಗೊಂದಲವಿಲ್ಲದೆ ಫೈನಲ್ ಆಗಿದೆ ಎಂಬ ಸಂದೇಶವನ್ನು ಖರ್ಗೆ ನೀಡುವ ಸಾಧ್ಯತೆಯಿದೆ.