ಬೆಂಗಳೂರು, ಮೇ 17 (DaijiworldNews/MS): ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವಲ್ಲಿ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿದ್ದ ಡಿಕೆ ಶಿವಕುಮಾರ್ ಅವರ ಮುಖ್ಯಮಂತ್ರಿ ಕನಸು ಬಹುತೇಕ ಕಮರಿ ಹೋಗಿದೆ.
ಶತಾಯಗತಾಯ ಈ ಬಾರಿ ಸಿಎಂ ಖುರ್ಚಿಗೇರಬೇಕೆಂಬ ಆಸೆ ಹೊತ್ತಿದ್ದ ಕನಕಪುರದ ಬಂಡೆಗೆ ಈಗ ಭಾರೀ ನಿರಾಸೆಯಾಗಿದೆ. ಹೈಕಮಾಂಡ್ ಮುಂದೆ ಸಿದ್ದು ಅವರನ್ನು ಸಿಎಂ ಮಾಡುವುದಕ್ಕೆ ಅವರು ಒಪ್ಪಿಗೆ ನೀಡಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾದರೆ, ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡದಿರುವ ಡಿಕೆಶಿ ಅವರ ಮುಂದಿನ ನಡೆ ಕೂಡ ಏನಾಗಿರಬಹುದು ಎಂಬುದು ಭಾರೀ ಕುತೂಹಲ ಮೂಡಿಸಿದೆ.
ಡಿಕೆಶಿಯವರಿಗೆ ಡಿಸಿಎಂ ಹುದ್ದೆ ಹಾಗೂ ಎರಡು ಪ್ರಮುಖ ಖಾತೆಗಳು (ಇಂಧನ ಹಾಗೂ ಜಲಸಂಪನ್ಮೂಲ) ಕೊಟ್ಟು ಹೈಕಮಾಂಡ್ ಸಮಾಧಾನಪಡಿಸುವ ಸಾಧ್ಯತೆ ಇದೆ.
ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹೆಸರು ಘೋಷಣೆ ಸಾಧ್ಯತೆ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ತವರು ಜಿಲ್ಲೆಯಲ್ಲಿ ಫುಲ್ ಹೈಅಲರ್ಟ್ ಮಾಡಲಾಗಿದೆ. ರಾಮನಗರ ಜಿಲ್ಲೆಯ ಪೊಲೀಸರಿಗೆ ಅಲರ್ಟ್ ಆಗಿರಲು ಸೂಚನೆ ನೀಡಿಲಾಗಿದೆ. ರಾಮನಗರ ಜಿಲ್ಲೆಗೆ ಹೆಚ್ಚುವರಿ ಪೊಲೀಸ್ ತುಕಡಿ ನಿಯೋಜನೆ ಮಾಡಲಾಗಿದೆ.