ನವದೆಹಲಿ, ಮೇ 17 (DaijiworldNews/MS): ಈ ಬಾರಿ ಮುಂಗಾರು ಆಗಮನ ಸ್ವಲ್ಪ ವಿಳಂಬವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಪ್ರತಿ ವರ್ಷ ಜೂನ್ 1 ರ ವೇಳೆಗೆ ಆಗಮಿಸುವ ಮುಂಗಾರು ಈ ಬಾರಿ ಜೂನ್ 4ರಂದು ಕೇರಳ ಪ್ರವೇಶಿಸುವ ಸಾಧ್ಯತೆ ಇದೆ. ಹೀಗಾಗಿ ಈ ಬಾರಿ ಬೇಸಿಗೆ ದೊಡ್ಡದಾಗುವ ಸಾಧ್ಯತೆ ಇದೆ.
ಸಾಮಾನ್ಯವಾಗಿ ಮುಂಗಾರು ಜೂನ್ 1ಕ್ಕೆ ಕೇರಳ ಪ್ರವೇಶಿಸುತ್ತದೆ. ಇದರಲ್ಲಿ 7 ದಿನ ಏರುಪೇರು ಆಗುವ ಸಾಧ್ಯತೆ ಇರುತ್ತದೆ. ಕಳೆದ ವರ್ಷ ಮೇ 29ಕ್ಕೆ ಮುಂಗಾರು ಪ್ರವೇಶಿಸಿತ್ತು. 2021 ರಲ್ಲಿ ಜೂನ್ 3, 2020ರಲ್ಲಿ ಜೂನ್ 1, 20019ರಲ್ಲಿ ಜೂನ್ 8 ಹಾಗೂ 2018 ರಲ್ಲಿ ಮೇ 29ಕ್ಕೆ ಕೇರಳಕ್ಕೆ ಮುಂಗಾರು ಆಗಮನವಾಗಿತ್ತು.
ಈ ಬಾರಿ ಜೂನ್ 4ರ ವೇಳೆಗೆ ಕೇರಳಕ್ಕೆ ಮುಂಗಾರು ಆಗಮನವಾಗಲಿದ್ದು, ನಂತರ ಕರ್ನಾಟಕ ಪ್ರವೇಶಿಸಲಿದೆ. ಈ ವರ್ಷ ವಾಡಿಕೆಯಂತೆ ಮಳೆಯಾಗಲಿದೆ ಎಂದು ಹೇಳಲಾಗಿದೆ.