ಬೆಂಗಳೂರು, ಮೇ 14 (DaijiworldNews/MS): ರಾಜ್ಯದ ಮುಂದಿನ ಸಿಎಂ ಆಯ್ಕೆ ಕುರಿತಂತೆ ಇನ್ನೇನು ಕೆಲವೇ ಕ್ಷಣದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಪ್ರಾರಂಭವಾಗಲಿದೆ.
ಸಿಎಂ ರೇಸ್ನಲ್ಲಿರುವ ಸಿದ್ದರಾಮಯ್ಯ ಈಗಾಗಲೇ ಬೆಂಗಳೂರಿನ ಖಾಸಗಿ ಹೋಟೆಲ್ಗೆ ಆಗಮಿಸಿದ್ದಾರೆ. ಅತ್ತ ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿರುವ ಡಿ.ಕೆ ಶಿವಕುಮಾರ್ ಕೂಡ ಈಗ ತಮ್ಮ ಮನೆಯಿಂದ ಹೊರಟು ಹೋಟೆಲ್ನತ್ತ ತಲುಪಿದ್ದಾರೆ .
ಹೈಕಮಾಂಡ್ ಕಳುಹಿಸಿರುವ ಮೂವರು ವೀಕ್ಷಕರು ಕೂಡ ಆಗಮಿಸಿದ್ದು, ಈ ಸಭೆ ಸಾಕಷ್ಟು ಕುತೂಹಲ ಮೂಡಿಸಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಬೆಂಬಲಿಗರು ಹೋಟೆಲ್ ಮುಂದೆ ಜಮಾಯಿಸಿದ್ದಾರೆ.