ನವದೆಹಲಿ, ಮೇ 14 (DaijiworldNews/MS):ಇಂಗ್ಲೆಂಡ್ನ ಅರಮನೆಯಲ್ಲಿರುವ ಕೊಹಿನೂರ್ ವಜ್ರ ಮತ್ತು ಸಾವಿರಾರು ಇತರ ವಸಾಹತುಶಾಹಿ ಕಲಾಕೃತಿಗಳನ್ನು ಮರಳಿ ಪಡೆಯುವುದಕ್ಕೆ ಭಾರತ ರಾಜತಾಂತ್ರಿಕ ಅಭಿಯಾನ ಪ್ರಾರಂಭಿಸಲಿದೆ ಎಂದು ಬ್ರಿಟಿಷ್ ದಿನಪತ್ರಿಕೆಯೊಂದು ವರದಿ ಮಾಡಿದೆ.
105.6 ಕ್ಯಾರೆಟ್ನ ಕೊಹಿನೂರ್ ವಜ್ರವನ್ನು ಈಸ್ಟ್ ಇಂಡಿಯಾ ಕಂಪನಿಯು ಲೂಟಿ ಮಾಡಿ ರಾಣಿ ವಿಕ್ಟೋರಿಯಾಗೆ ನೀಡಿತ್ತು. ಹೀಗಾಗಿ, ದೇಶದಿಂದ ಕೊಳ್ಳೆ ಹೊಡೆದಿರುವ ಬೆಲೆಬಾಳುವ ಪಾರಂಪರಿಕ ವಸ್ತುಗಳನ್ನು ಯುಕೆಯಿಂದ ವಾಪಾಸ್ ಪಡೆಯುವುದಕ್ಕೆ ಅಧಿಕಾರಿಗಳು ರಾಜತಾಂತ್ರಿಕ ಮಾರ್ಗದ ಮೊರೆ ಹೋಗಲು ಸಿದ್ಧರಾಗಿರುವುದಾಗಿ ವರದಿ ಹೇಳಿದೆ.
ದಿವಂಗತ ಬ್ರಿಟನ್ 2ನೇ ಎಲಿಜಬೆತ್ ಧರಿಸುತ್ತಿದ್ದ ಕಿರೀಟ ಬರೋಬ್ಬರಿ 4,500 ಕೋಟಿ ರೂ.ಮೌಲ್ಯದಾಗಿದೆ. ಭಾರತದಲ್ಲಿ ಸಿಕ್ಕ 105.6 ಕ್ಯಾರೆಟ್ ಡೈಮಂಡ್ 1848ರಲ್ಲಿ ಬ್ರಿಟಿಷರು ಪಂಜಾಬ್ ಅನ್ನು ವಶಪಡಿಸಿಕೊಂಡ ನಂತರ ಅವರ ಪಾಲಾಯಿತು. ಆಗಿನಿಂದಲೂ ಬ್ರಿಟಿಷ್ ರಾಜಮನೆತನದ ಕಿರೀಟದಲ್ಲೇ ವಜ್ರ ಇದೆ