ದಾವಣಗೆರೆ, ಮೇ 14 (DaijiworldNews/HR): ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ವಿಷಯ ತಿಳಿಯುತ್ತಿದ್ದಂತೆ ಅಭಿಮಾನಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ರೇಣುಕಾಚಾರ್ಯ ಚುನಾವಣೆಯಲ್ಲಿ ಸೋತಿದ್ದರಿಂದ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದು, ಅನೇಕರು ಈ ನಿರ್ಧಾರದಿಂದ ಆಘಾತಕ್ಕೆ ಒಳಗಾಗಿ ಅವರ ನಿವಾಸದ ಮುಂದೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ನೆರೆದಿದ್ದರು.
ಇನ್ನು ಚುನಾವಣಾ ನಿವೃತ್ತಿ ಘೋಷಣೆ ವಾಪಸ್ಸು ಪಡೆಯುವಂತೆ ಪ್ರತಿಭಟನೆ ನಡೆಸಿದ್ದು, ವೇಳೆ ರೇಣುಕಾಚಾರ್ಯ ಅಭಿಯಾನಿಯೊಬ್ಬರು ವಿಷ ಸೇವಿಸಲು ಮುಂದಾದ ಘಟನೆಯು ನಡೆದಿದೆ.