ಮಂಡ್ಯ,ಮೇ14 (DaijiworldNews/KH):ಭ್ರಷ್ಟ ಹಾಗೂ ದುರಹಂಕಾರಿ ಕುಟುಂಬ ರಾಜಕಾರಣದ ವಿರುದ್ಧ ನಿರ್ಣಾಯಕವಾಗಿ ಮತ ಚಲಾಯಿಸಿದ್ದಕ್ಕೆ ಮಂಡ್ಯ ಜನತೆಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕೃತಜ್ಞತೆ ಸಲ್ಲಿಸಿದ್ದಾರೆ.
ಬಿಜೆಪಿ ಪಕ್ಷಕ್ಕೆ ಮತದಾನ ಮಾಡಿದ ಸರ್ವರಿಗೂ ಹಾಗೂ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕಾಗಿ ಶ್ರಮಿಸಿದ ಎಲ್ಲಾ ಮಂಡ್ಯದ ಕಾರ್ಯಕರ್ತರಿಗೆ ಸುಮಲತಾ ಅಂಬರೀಶ್ ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ. ಗೆಲುವು ಹಾಗೂ ಸೋಲು ಚುನಾವಣೆಯ ಭಾಗವಾಗಿದೆ, ಹಾಗಂತ ನಾವು ಧೈರ್ಯ ವನ್ನು ಕಳೆದುಕೊಳ್ಳದೇ ಇರುವುದು ಅತ್ಯಂತ ಮುಖ್ಯವಾಗಿದೆ ಎಂದರು. ಕೆ.ಆರ್ ನಗರವೂ ಸೇರಿದಂತೆ ನನ್ನ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಗೆದ್ದ ಎಲ್ಲ ಅಭ್ಯರ್ಥಿಗಳಿಗೆ ಅಭಿನಂದನೆಗಳು ಹಾಗೂ ಮಂಡ್ಯದ ಅಭಿವೃದ್ದಿಗಾಗಿ ತಾವೆಲ್ಲರೂ ಧನಾತ್ಮಕವಾಗಿ ಕೆಲಸ ಮಾಡಲಿದ್ದೀರಿ ಎಂಬ ನಂಬಿಕೆ ಮತ್ತು ಹಾರೈಕೆ ನನ್ನದು ಎಂದು ಬರೆದುಕೊಂಡಿದ್ದಾರೆ.