ನವದೆಹಲಿ,ಮಾ28(AZM): ಆಧಾರ್ ಕಾರ್ಡ್ ನೊಂದಿಗೆ ಪಾನ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ ಪಾನ್ ಅಮಾನ್ಯವೆಂದು ಪರಿಗಣಿಸಲಾಗಿದ್ದು, ಈ ಹಿನ್ನಲೆ ಮಾರ್ಚ್ 31ರೊಳಗೆ ಆಧಾರ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡಬೇಕಾಗಿದೆ.
ಆದಾಯ ತೆರಿಗೆ ಇಲಾಖೆ ಹೊರಡಿಸಿರುವ ಜಾಹೀರಾತಿನ ಪ್ರಕಾರ, ಮಾರ್ಚ್ 31ರೊಳಗೆ ಆಧಾರ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡಬೇಕು. ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 139 ಎಎ ಪ್ರಕಾರ, ನಿಮ್ಮ ಪ್ಯಾನ್ ಕಾರ್ಡ್ ಅಮಾನ್ಯವಾಗಲಿದೆ. ಪ್ಯಾನ್ ಕಾರ್ಡ್ ಹೊಂದದವರು ಐಟಿಆರ್ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಪೀಪಲ್ ಎಡ್ವೈಜರಿ ಸರ್ವಿಸ್ ಪಾರ್ಟನರ್ ಸಂಸ್ಥೆಯ ಶಾಲಿನಿ ಜೈನ್ ಪ್ರಕಾರ, 2016-2017ರ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ಸಲ್ಲಿಸುವ ವೇಳೆ ಪ್ಯಾನ್ ಜೊತೆ ಆಧಾರ್ ಲಿಂಕ್ ಮಾಡದಿರುವವರಿಗೆ ಇದು ಅನ್ವಯಿಸಲಿದೆ.
2016-2017, 2017-2018 ರ ಅವಧಿಯಲ್ಲಿ ತೆರಿಗೆ ಪಾವತಿ ವೇಳೆ ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡಿದವರು ಈ ಗಡುವಿನ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದು ಹೇಳಿದ್ದಾರೆ.